ಶ್ರೀ ರವಿ ಬಂಗಾರೆಪ್ಪನವರ ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಬೆಳಗಾವಿ ರವರ ಅಧ್ಯಕ್ಷತೆಯಲ್ಲಿ ಸವದತ್ತಿ ತಾಪಂ ಸಭಾ ಭವನದಲ್ಲಿ ಶನಿವಾರ ಮನರೇಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿತು.

ಶ್ರೀ ರವಿ ಬಂಗಾರೆಪ್ಪನವರ ಮಾನ್ಯ ಯೋಜನಾ ನಿರ್ದೇಶಕರು ರವರು ಮಾತನಾಡಿ ಮನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ನಿರಂತರವಾಗಿ ಕೆಲಸವನ್ನು ನೀಡಬೇಕು. ಗ್ರಾಮ ಪಂಚಾಯತಿಯವರಿಗೆ ನೀಡಿದ ಮಾನವ ದಿನಗಳ ಗುರಿಯನ್ನು ನಿಗದಿತ ಸಮಯದಲ್ಲಿ ಸೃಜನೆಯನ್ನು ಮಾಡುವುದು. ಹಾಗೂ ಮನರೇಗಾ ಯೋಜನೆಯಡಿ ಕೈಗೊಂಡು ಮುಕ್ತಾಯಗೊಂಡ ಕಾಮಗಾರಿಗಳನ್ನು ಕೂಡಲೇ MIS ದಲ್ಲಿ Work Completion ಮಾಡುವುದು, ಮನರೇಗಾ ಯೋಜನೆಯಡಿ ಕೈಗೊಂಡು ಅಪೂರ್ಣವಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಮುಕ್ತಾಯಗೊಳಿಸುವಂತೆ ಸೂಚನೆಯನ್ನು ನೀಡಿದರು. ಕೂಸಿನ ಮನೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುಂತೆ ಸೂಚನೆಯನ್ನು ನೀಡಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲ ಜಲ ಮೂಲಗಳನ್ನು ಹಾಗೂ ಕುಡಿಯುವ ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಿ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರನ್ನು ಪೂರೈಸುವಂತೆ ಸೂಚನೆಯನ್ನು ನೀಡಿದರು.
ಸ್ವಚ್ಛಭಾರತ, ಸಾಮಾಜಿಕ ಲೆಕ್ಕ ಪರಿಶೋಧನೆ, ಕೂಸಿನ ಮನೆ, ಎನ್ ಆರ್ ಎಲ್ಎಮ್, ಜೆಜೆಎಮ್, ಸೇರಿದಂತೆ ವಿವಿಧ ಯೋಜನೆಗಳ ಕುರಿತು ಮಾನ್ಯರು ಪ್ರಗತಿ ಪರಿಶೀಲನೆ ನಡೆಸಿದರು.
ಸವದತ್ತಿ ಪಟ್ಟಣದಲ್ಲಿರುವ ತಾಲೂಕಾ ಮಟ್ಟದ ಗ್ರಾಮೀಣ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಕ್ಕೆ ಭೇಟಿ ನೀಡಿ ಪ್ರಯೋಗಾಲಯವನ್ನು ಪರಿಶೀಲಿಸಿ ಕಡ್ಡಾಯವಾಗಿ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಕಾಲ ಕಾಲಕ್ಕೆ ಮಾಡಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುವಂತೆ ಸೂಚನೆ ನೀಡಿದರು.

ಬಳಿಕ ಹೂಲಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ದಾಖಲಾತಿಯನ್ನು ಪರಿಶೀಲಿಸಿ ನಂತರ ಹೂಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಭೋಜನಾಲಯ ಹಾಗೂ ಪೇವರ್ಸ ಅಳವಡಿಕೆ ಕಾಮಗಾರಿಯನ್ನು ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಹೂಲಿ ಗ್ರಾಮದಲ್ಲಿನ ವನದನ ವಿಕಾಸ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕರು (ಗ್ರಾ.ಉ,) ಆರ್ ಬಿ ರಕ್ಕಸಗಿ, ತಾಪಂ ಸಹಾಯಕ ನಿರ್ದೇಶಕರು (ಪಂ.ರಾ) ಆರ್ ಎ ಪಾಟೀಲ, ತಾಪಂ ವ್ಯವಸ್ಥಾಪಕ ಮಲ್ಲಿಕಾರ್ಜುನ ಕಂಬಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಗ್ರಾ.ಕು.ನೀ&ನೈ) ಬಸವರಾಜ ಅಯ್ಯನಗೌಡರ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಪಂ ವಿಷಯ ನಿರ್ವಾಹಕರು, ತಾಪಂ ಎಂಐಎಸ್ ಸಂಯೋಜಕ ನಾಗರಾಜ ಬೆಹರೆ, ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ, ತಾಂತ್ರಿಕ ಸಂಯೋಜಕ ಮಹಾದೇವ ಕಾಮನ್ನವರ, ತಾಂತ್ರಿಕ ಸಹಾಯಕರು, ತಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.




