ದೆಹಲಿಯ ಯುವಕನೋರ್ವ ತನ್ನ ಪ್ರೇಯಸಿ ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಲಿ ಎಂದು 121 ಲೀ ಗಂಗಾಜಲವನ್ನು ಹೆಗಲ ಮೇಲೆ ಹೊತ್ತುಕೊಂಡು ಕನ್ವರ್ ಯಾತ್ರೆಯಲ್ಲಿ ಭಾಗಿಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕನ್ವರ್ ಯಾತ್ರೆಯು ಲಕ್ಷಾಂತರ ಶಿವ ಭಕ್ತರು ಆಚರಿಸುವ ವಾರ್ಷಿಕ ತೀರ್ಥಯಾತ್ರೆಯಾಗಿದೆ. ಈ ಶುಭ ಯಾತ್ರೆಯಲ್ಲಿ ಭಾಗವಹಿಸುವ ಭಕ್ತರನ್ನು ಕನ್ವರ್ಯರು ಎಂದು ಕರೆಯಲಾಗುತ್ತದೆ.
ಈ ಪವಿತ್ರ ಮಾಸವನ್ನು ಹಿಂದೂ ಮಾಸವಾದ ಶ್ರಾವಣ (ಜುಲೈ-ಆಗಸ್ಟ್) ದಲ್ಲಿ ಆಚರಿಸಲಾಗುತ್ತದೆ. ಶ್ರಾವಣ ಎಂದೂ ಕರೆಯಲ್ಪಡುವ ಸಾವನ್, ಹಿಂದೂ ಕ್ಯಾಲೆಂಡರ್‌ನಲ್ಲಿ ಪವಿತ್ರ ಮಾಸವಾಗಿದೆ.
ಈ ಸಮಯದಲ್ಲಿ ಭಕ್ತರು ನೂರಾರು ಕಿಮೀ ಕಾಲ್ನಡಿಗೆಯಲ್ಲೇ ಕ್ರಮಿಸಿ ಗಂಗಾ ಜಲವನ್ನು ಸಂಗ್ರಹಿಸಿ ಯಾತ್ರೆ ಮಾಡಿ ಮಹಾದೇವನಿಗೆ ಅರ್ಪಿಸಿ, ಆತನ ದರ್ಶನ ಪಡೆದರೆ ಪ್ರಯಾಣದ ಉದ್ದೇಶ ನಂಬಿಕೆ, ತಪಸ್ಸು ಮತ್ತು ಆಸೆಗಳನ್ನು ಈಡೇರುತ್ತದೆ ಎಂಬುವುದು ಪ್ರತಿಯೊಬ್ಬ ಭಕ್ತರ ನಂಬಿಕೆ..
ಹೀಗಾಗಿ ಸಾವಿರಾರು ಭಕ್ತರು ಈ ಕನ್ವರ್ ಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ಅದರಂತೆ ಈ ಯಾತ್ರೆಯಲ್ಲಿ ವಿಶೇಷ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆದಿದ್ದು, ಇದು ಶಿವನ ಮೇಲಿನ ಭಕ್ತಿ, ನಂಬಿಕೆಯನ್ನು ತೋರಿಸುತ್ತದೆ.
ಇತ್ತೀಚೆಗೆ ದಿನಗಳಲ್ಲಿ ಪ್ರೀತಿಯ ವಿಚಾರಕ್ಕೆ ಸಾಕಷ್ಟು ಕೊಲೆ, ಹಲ್ಲೆ, ಕಿರುಕುಳ ನೀಡುತ್ತಿರುವ ಪ್ರಕರಣಗಳು ದಾಖಲಾಗುತ್ತಲೇ ಇದೆ.
ಇಂತವರ ನಡುವೆ ದೆಹಲಿಯ ನರೇಲಾ ನಿವಾಸಿ ರಾಹುಲ್ ಕುಮಾರ್ ಎಂಬ ಯುವಕ ತನ್ನ ಪ್ರೇಯಸಿಗಾಗಿ ಬರೋಬ್ಬರಿ 121 ಲೀ ಗಂಗಾಜಲವನ್ನು ಹೆಗಲ ಮೇಲೆ ಹೊತ್ತುಕೊಂಡು ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದು, ಬರೋಬ್ಬರಿ 220 ಕಿಮೀ ಪಾದಯಾತ್ರೆ ಮಾಡಿದ್ದಾರೆ.
12 ನೇ ತರಗತಿಯ ವರೆಗೆ ವ್ಯಾಸಂಗ ಮಾಡಿದ್ದ ರಾಹುಲ್, ತನ್ನ ಪ್ರೇಯಸಿ ಐಪಿಎಸ್ ಪರೀಕ್ಷೆ ಪಾಸಾಗಬೇಕು ಎಂಬ ಆಸೆಯಿಂದ ಎರಡು ಡ್ರಮ್ ಗಳಿಗೆ ಸುಮಾರು 121 ಲೀಟರ್ ಗಂಗಾಜಲವನ್ನು ತುಂಬಿಸಿ ಹೆಗಲ ಮೇಲೆ ಹೊತ್ತುಕೊಂಡು ಬರೋಬ್ಬರಿ 220 ಕಿಮೀ ಪಾದಯಾತ್ರೆ ಮಾಡಿದ್ದಾರೆ.
ರಾಹುಲ್ ಪ್ರೇಯಸಿ ಐಪಿಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಈ ಹಿನ್ನಲೆ ಆಕೆ ಪಾಸ್ ಆಗಲಿ ಎಂದು ಈ ಪಾದಯಾತ್ರೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಈ ಕನಸು ನೆರವೇರುವವರೆಗೆ ಈ ಪಾದಯಾತ್ರೆಯನ್ನು ಮಾಡುತ್ತಲೇ ಇರುತ್ತೇನೆ ಎಂದು ರಾಹುಲ್ ಕುಮಾರ್ ತಿಳಿಸಿದ್ದಾರೆ.




