Ad imageAd image

ಪ್ರಿಯತಮೆ ತನ್ನ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಯುವಕ ಆತ್ಮಹತ್ಯೆ 

Bharath Vaibhav
ಪ್ರಿಯತಮೆ ತನ್ನ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಯುವಕ ಆತ್ಮಹತ್ಯೆ 
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ: ಪ್ರಿಯತಮೆ ತನ್ನ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೇರೇಸಂದ್ರ ಗ್ರಾಮದ ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದೆ.

ಲವರ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನೊಂದು ಆತ್ಮಹತ್ಯೆ ಮಾಡಿಕೊಂಡಾತನನ್ನು ಕೇರಳದ ವಯನಾಡು ಮೂಲದ ಮೊಹಮ್ಮದ್ ಶಬ್ಬೀರ್(26) ಆಗಿದ್ದಾರೆ.

ಈತ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ಆರ್ ಸಿ ಟಿ ಎನ್ನುವ ಅಲೈಡ್ ಸೈನ್ಸ್ ಕೋರ್ಸ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು.

ಕೆಲವೇ ತಿಂಗಳಲ್ಲಿ ಮೊಹಮ್ಮದ್ ಶಬ್ಬೀರ್ ವ್ಯಾಸಂಗ ಕೂಡ ಮುಕ್ತಾಯಗೊಳ್ಳುತ್ತಿತ್ತು. ಆದರೇ ಇಂದು ಬೆಳಗ್ಗೆ ಹಾಸ್ಟೆಲ್ ರೂಮಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಹಾಸ್ಟೆಲ್ ರೂಮಿನ ಕಿಟಕಿಗೆ ಟವೆಲ್ ಕಟ್ಟಿ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ನೇಣಿಗೂ ಮುನ್ನ ಮೊಹಮ್ಮದ್ ಶಬ್ಬೀರ್ ಡೆತ್ ನೋಟ್ ಬರೆದಿದ್ದು, ಅದರಲ್ಲಿ ನಾನು ನಿನ್ನನ್ನು ಯಾವಾಗಲೂ ಪ್ರೀತಿ ಮಾಡುತ್ತೇನೆ. ನನ್ನ ಪ್ರೀತಿ ಯಾವಾಗಲೂ ನಿರಂತರವಾಗಿದೆ. ನೀನೇ ಮೊದಲು, ನೀನೇ ಕೊನೆ ಎಂಬುದಾಗಿ ಬರೆದಿದ್ದಾನೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!