Ad imageAd image

ಮುಧೋಳ್ ನಲ್ಲಿ ಕಾನೂನು ಅರಿವು ಮತ್ತು ಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮ.

Bharath Vaibhav
ಮುಧೋಳ್ ನಲ್ಲಿ ಕಾನೂನು ಅರಿವು ಮತ್ತು ಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮ.
WhatsApp Group Join Now
Telegram Group Join Now

ಸೇಡಂ : ತಾಲೂಕ ಕಾನೂನು ಸೇವಾ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸೇಡಂ ಇವರ ಸಂಯುಕ್ತ ಆಶ್ರಯದಲ್ಲಿ ಮುಧೋಳ್ ನಾಡಕಚೇರಿ ಕಾರ್ಯಾಲಯದಲ್ಲಿ ಕಾನೂನು ಅರಿವು ಮತ್ತು ಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕಲಬುರಗಿ ಪೀಠಸಿನ ಸೇಡಂ ಕರಣ ಗುಜ್ಜರ್ ಅವರು ಸಸಿಗೆ ನೀರುರೆವುದರ ಮುಖಾಂತರ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಸೇಡಂ ಸಾಗರ ಗುರುಗೌಡ ಪಾಟೀಲ್ ಅವರು ವಹಿಸಿದರು.

ಮುಖ್ಯ ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ತಾಲೂಕ ಕಾನೂನು ಸೇವಾ ಸಮಿತಿ ಸೇಡಂ ಬಾಲು ಅವರು ವಹಿಸಿದರು.

ಅತಿಗಳಾಗಿ ಸಹಾಯಕ ಸರಕಾರಿ ಅಭಿಯೋಜಕರು ಸೇಡಂ ಹನುಮಗೌಡ, ನ್ಯಾಯವಾದಿಗಳ ಸಂಘ ಅಧ್ಯಕ್ಷರಾದ ಚಕ್ರಪಾಣಿ ಕುಲಕರ್ಣಿ, ಉಪಾಧ್ಯಕ್ಷರಾದ ಶ್ರೀದೇವಿ ಕಾಡ, ಕಾರ್ಯದರ್ಶಿಗಳಾದ ರಾಮರೆಡ್ಡಿ ಪಾಟೀಲ್, ಎಡಿಜಿಪಿ ಈಶ್ವರ ಕುಲಕರ್ಣಿ, ಸಿಡಿಪಿಓ ಅನುರಾಧ ಪಾಟೀಲ ಭಾಗಿಯಾಗಿದ್ದರು.

ಹಿರಿಯ ನ್ಯಾಯವಾದಿಗಳಾದ ನಾಗೇಶ್ ಮಿಟ್ಟಿ ಅವರು ಉಪನ್ಯಾಸ ನೀಡಿದರು.

ತದನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಅನುರಾಧಾ ಪಾಟೀಲ್ ಅವರು ಪೌಷ್ಟಿಕ ಆಹಾರ ಶಿಬಿರ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮುಧೋಳ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪ್ರವೈಸರ್, ಗ್ರಾಮದ ತಾಯಂದಿರು ಮತ್ತು ಊರಿನ ಗಣ್ಯ ವ್ಯಕ್ತಿಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಕಿಯರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!