Ad imageAd image

ಕರವೇ ಸಂಘಟನೆಯ ತಾಲೂಕಾ ಮಟ್ಟದ ಸಭೆ ನಡೆಯಿತು.

Bharath Vaibhav
ಕರವೇ ಸಂಘಟನೆಯ ತಾಲೂಕಾ ಮಟ್ಟದ ಸಭೆ ನಡೆಯಿತು.
WhatsApp Group Join Now
Telegram Group Join Now

ಚಿಕ್ಕೋಡಿ  : ರವಿವಾರ ದಿನಾಂಕ: 07-09-2025 ರಂದು ಚಿಕ್ಕೋಡಿ ನಗರದ ಪ್ರವಾಸ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕೋಡಿ ತಾಲೂಕಾ ಮಟ್ಟದ ಸಭೆ ಜರಗಿತು. ಸಭೆಯಲ್ಲಿ ತಾಲೂಕ ಮಟ್ಟದ ಕರ್ನಾಟಕ ರಕ್ಷಣಾ ವೇದಿಕೆ ಎಲ್ಲಾ ಪದಾಧಿಕಾರಿಗಳು ಮತ್ತು ಗ್ರಾಮ ಘಟಕದ ಅಧ್ಯಕ್ಷರು ಮತ್ತು ವಿವಿಧ ಘಟಕ ಅಧ್ಯಕ್ಷರು ಭಾಗವಹಿಸಿದ್ದರು. ಸಭೆಯ ನೇತೃತ್ವವನ್ನು ವಹಿಸಿದ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಗಣೇಶ ರೂಕಡೆ ಅವರು ನೇತೃತ್ವ ವಹಿಸಿ ಈ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಚಿಕ್ಕೋಡಿ ತಾಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯನ್ನು ಪ್ರತಿ ಹಳ್ಳಿ-ಹಳ್ಳಿಗಳಿಗೆ ಶಾಖೆ ಮಾಡಿ ಸಂಘಟನೆಯನ್ನು ಬಲ ಪಡಿಸಬೇಕು ಅದಲ್ಲದೆ ಹೋಬಳಿ ಮಟ್ಟದಲ್ಲಿ ಸಂಘಟನೆಯನ್ನು ಮಾಡುವ ಮೂಲಕ ಮಹಿಳಾ ಘಟಕ, ರೈತ ಘಟಕ, ಕಾರ್ಮಿಕ ಘಟಕ, ವಿದ್ಯಾರ್ಥಿ ಘಟಕ ಸಾಮಾಜಿಕ ಜಾಲತಾನವನ್ನು ಬಲಪಡಿಸಬೇಕೆಂದು ಚಿಕ್ಕೋಡಿ ತಾಲೂಕಿನ ಎಲ್ಲಾ ಕಾರ್ಯಕರ್ತರಿಗೆ ಕರೆ ನೀಡಿದರು ಮತ್ತು ಇದೆ ಸಂಧರ್ಭದಲ್ಲಿ ಚಿಕ್ಕೋಡಿ ತಾಲೂಕಿನ ಅಧ್ಯಕ್ಷರಾದ ಶ್ರೀ ಸಂಜು ಬಡಿಗೇರ ಅವರು ಕೂಡಾ ಮಾತನಾಡಿ ಚಿಕ್ಕೋಡಿ ಗಡಿಭಾಗ ಇರುವುದರಿಂದ ತಾಲೂಕಿನಲ್ಲಿ ಕನ್ನಡ ನಾಡು ನುಡಿ ಜಲಕ್ಕೆ ಹೆಚ್ಚು ಒತ್ತುಕೊಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಜೊತೆಗೆ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಟ ಮಾಡಲಾಗುವುದೆಂದು ಹೇಳಿದರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷರಾದ ಚಂದ್ರಕಾಂತ ಹುಕ್ಕೇರಿಯವರು ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಕರವೇ ಸದಸ್ಯತ್ವವನ್ನು ಪಡೆದುಕೊಂಡು ಕರ್ನಾಟಕದ ನಾಡು, ನುಡಿ, ಜಲ ಬೆಂಬಲ ನೀಡಬೇಕೆಂದು ಯುವಕರಿಗೆ ಕರೆಕೊಟ್ಟರು.

ಶ್ರೀ ಶಂಕರ ಅವಡಖಾನ ಕಾರ್ಯಕ್ರಮ ನಿರೂಪಣೆ ಮಾಡಿದರು ಶ್ರೀ ಕೃಷ್ಣಾ ಖಾನಪ್ಪನವರ, ಸಂತೋಷ ಪೂಜಾರಿ, ಪ್ರತಾಪ ಪಾಟೀಲ, ಪ್ರಕಾಶ ಲಮಾನಿ, ಬಸರಾಜ ಅವರೋಳಿ ಸಂಜು ಲಠ್ಠೆ, ಅಮೂಲ ನಾವಿ, ಸಂಜು ಹಿರೇಮಠ, ರಪೀಕ ಪಠಾನ, ಚನ್ನಪ್ಪಾ ಬಡಿಗೇರ, ಸಚೀನ ದೊಡ್ಡಮನಿ, ಶಿವು ಮದಾಳಿ, ಮಾಳು ಕರೆನ್ನವರ ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!