ಕಾಳಗಿ :ತಾಲೂಕಿನ ಕುಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಇಂದು ವಿದ್ಯಾರ್ಥಿ ಗಳಿಂದ ಆಯೋಜನೆ ಮಾಡಲಾಯಿತು, ಮೊದಲಿಗೆ ಅಕ್ಷರದಾತೆ ಸಾವಿತ್ರಿಬಾಯಿ ಫುಲೆ ಮತ್ತು ಡಾ, ಸರ್ವಪಲಿ ರಾಧಾಕೃಷ್ಣ ರವರ ಭಾವಚಿತ್ರಕ್ಕೆ ಶಾಲಾ ಮಕ್ಕಳಿಂದ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಇದೆ ವೇಳೆ ಹಣಮಂತ ಕಾಂಬ್ಳೆ ಬಿ ಆರ್ ಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ : ಹೊಡ್ಡೆ ಬೀರನಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಸೋಮಶೇಖರ ಔರಾದಿ, ಹೊಡ್ಡೆ ಬೀರನಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ, ಊರಿನ ಹಿರಿಯ ಮುಖಂಡರಾದ ಸಿದ್ದು ಪೊಲೀಸ್ ಪಾಟೀಲ್, ಚೆನ್ನಬಸಪ್ಪ ಪಾಟೀಲ್, ಸುರೇಶ ಮಾಲಿ ಪಾಟೀಲ್, ಸಿದ್ದು ಹೂಗಾರ್, ಸುಭಾಷ್ ಭಾಗ, ಶಾಲಾ ಮುಖ್ಯಗುರುಗಳು ಶ್ರೀಮಂತ ಗಂಜಿ, ಸಹ ಶಿಕ್ಷಕರಾದ ಶಂಕರ್ ಗಂಜಿ, ಪ್ರಭಾಕರ್ ಭಂಡಾರಿ, ಅತಿಥಿ ಶಿಕ್ಷಕಿರಾದ ಪಲ್ಲವಿ ದೇವನಕರ್, ಮಕ್ಕಳು ಉಪಸ್ಥಿತರಿದ್ದರು.
ವರದಿ: ಹಣಮಂತ ಕುಡಹಳ್ಳಿ




