ಯಲಹಂಕ: ಕ್ಷೇತ್ರದ ವಡೇರಹಳ್ಳಿ ಗ್ರಾಮ ಪಂಚಾಯಿತಿ 2025- 26 ನೇ ಸಾಲಿನ ಪ್ರಥಮ ಗ್ರಾಮ ಸಭೆಯು ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಸಭೆಗೆ ಜ್ಯೋತಿ ಬೆಳಗುವ ಮೂಲಕ ಅಧ್ಯಕ್ಷರು ಸಭೆಗೆ ಚಾಲನೆ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಾಸ್ತಾವಿಕ ಭಾಷಣ ಮಾಡಿ ಆಡಳಿತ ವರದಿ ಮಂಡನೆ ಮಾಡಿದರು.
ನಂತರ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಸಿ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಅದನಂತರ SC.ST.ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶೇಕಡಾ 25% ದೊರೆಯುವ ಅನುದಾನದಲ್ಲಿ ಪ್ರೋತ್ಸಾಹ ಧನ,ಅಂಗವಿಕಲ ರಿಗೆ, ಬಡ ರೋಗಿಗಳಿಗೆ ಸಹಾಯ ಧನ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್ ಸರೋಜಮ್ಮ, ಉಪಾಧ್ಯಕ್ಷ ಎಸ್ ರಾಕೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್ .ರುದ್ರೇಶಯ್ಯ, ಕಾರ್ಯದರ್ಶಿ ಎಂ. ಚನ್ನಪ್ಪ, ಪಂಚಾಯತಿ ಸದಸ್ಯರು ಸುತ್ತಮುತ್ತಲಿನ ಗ್ರಾಮದ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.
ವರದಿ :ಬಾಲಾಜಿ ವಿ




