ಯಳಂದೂರು : ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ ಕ್ಷೇತ್ರ ಶಿಕ್ಷಣಧಿಕಾರಿಗಳ ಕಛೇರಿ ಯಳಂದೂರು ಹಾಗೂ ಜೆ ಎಸ್ ಎಸ್ ಬಾಲಕಿಯರ ಪ್ರೌಢಶಾಲೆ ಯಳಂದೂರು ಇವರ ಸಂಯೋಗದೊಂದಿಗೆ ಯಳಂದೂರು ತಾಲ್ಲೋಕು ಮಟ್ಟದ ಪ್ರೌಢಶಾಲೆ ಕ್ರೀಡಾಕೂಟವನ ಸಂತೆ ಮರಹಳ್ಳಿ ಜೆ ಎಸ್ ಎಸ್ ಶಾಲೆ ಕ್ರೀಡಾಂಗಣದಲ್ಲಿ ನೆಡೆಸಲಾಯಿತು.
ಕಾರ್ಯಕ್ರಮವನ್ನು ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎ ಆರ್ ಕೃಷ್ಣ ಮೂರ್ತಿ ರವರ ಸಸಿಗೆ ನೀರಕುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿ ಅವರ ಜೀವನದಲ್ಲಿ ಕ್ರೀಡೆ ಒಂದು ಮಹತ್ವದ ಭಾಗ ಕ್ರೇಡೆಯಿಂದ ಅರೋಗ್ಯ ವೃದಿಸುತ್ತದೆ ಮಕ್ಕಳು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅಧ್ಯಕ್ಷರಾದ ಚಂದ್ರು, ಬಿ ಓ ಮರಯ್ಯ, ಪಿ ಎಸ್ ಐ ತಾಜ್ ಉದ್ದಿನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಹೇಶ್ ಅಮ್ಮನಪುರ, ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಮಂಜುನಾಥ್, ಬಿ ಆರ್ ಸಿ ಸಂಪನ್ಮೂಲ ಅಧಿಕಾರಿ ರೇಚಣ್ಣ,ತಾಲ್ಲೋಕು ಪ್ರಾಥಮಿಕ ಶಾಲಾ ಶಿಕ್ಷಕರ ಸೋಮಣ್ಣ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಮುರುಳಿಧರ್, ತಾಲ್ಲೋಕು ಪ್ರೌಢಶಾಲಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಲಂಕಾರಿ, ದೈಹಿಕ ಪರಿವಿಕ್ಷಕರಾದ, ಶಾಂತರಾಜು, ಜೆ ಎಸ್ ಎಸ್ ಶಾಲಾ ಶಿಕ್ಷಕರುಗಳು ಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ




