ಸೇಡಂ:ವಿಶ್ವದ ಪ್ರಸಿದ್ಧ ಲಂಡನ್ ನಗರದ ಥೇಮ್ಸ್ ನದಿ ದಂಡೆಯ ಮೇಲೆ ಸ್ಥಾಪಿಸಲ್ಪಟ್ಟ ವಚನ ಕ್ರಾಂತಿಯ ಹರಿಹಾರ, ವಿಶ್ವಗುರು ಶ್ರೀ ಬಸವಣ್ಣನವರ ಪ್ರತಿಮೆಗೆ ಸೇಡಂ ಶಾಸಕರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಭೇಟಿ ನೀಡಿದರು.
ಬಸವಣ್ಣನವರ ಪ್ರತಿಮೆ ಕಂಡ ಕ್ಷಣ ನಮಸ್ಕರಿಸಿ, ಬಸವಾದಿ ಶರಣರ ಪರಂಪರೆಯಲ್ಲಿ ನಡೆಯುವ ನಮ್ಮಂತಹವರಿಗೆ ಹೆಮ್ಮೆ ಎನಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಲಂಡನ್ ನಗರದ ಥೇಮ್ಸ್ ನದಿಯವರೆಗೂ ಬಸವಣ್ಣನವರ ಕೀರ್ತಿ ಹಬ್ಬಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಸುಧಾಕರ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಬಂಡಾರಿ ಹಾಗೂ ಲಂಡನಿನ ನೀರಜ್ ಪಾಟೀಲ ಸೇರಿದಂತೆ ಸ್ಥಳೀಯ ಕನ್ನಡಿಗರು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




