ಭಾಲ್ಕಿ : ಅಗಷ್ಟ ತಿಂಗಳ ಕೊನೆಯಲ್ಲಿ ಸುರಿದ ಭಾರಿ ಮಳೆಯ ಪರಿಣಾಮವಾಗಿ ಭಾಲ್ಕಿ ತಾಲೂಕಿನ ಸುಮಾರು 3 ಸಾವಿರ ಎಕರೆ ಜಮೀನಿನಲ್ಲಿ ಬೆಳೆದ ಉದ್ದು, ಹೆಸರು, ಸೋಯಾ, ತೊಗರಿ ಮತ್ತು ಕಬ್ಬು ಬೆಳೆ ಹಾನಿಗೊಳಗಾಗಿದು.
ತಾಲೂಕಿನಲ್ಲಿ ಉಂಟಾದ ಅತಿವೃಷ್ಟಿಯ ಕಾರಣದಿಂದಾಗಿ ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ, ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಕೂಡಲೇ ರೈತರ ನೇರವಿವೆಗೆ ಧಾವಿಸಬೇಕು ಎಂದು ಆಗ್ರಹಿಸಿ ಬೀದರ ಜಿಲ್ಲಾ ನವಚೈತನ್ಯ ಸೇವಾ ಸಮಿತಿ ವತಿಯಿಂದ ಮುಖಂಡ ಡಿ.ಕೆ ಸಿದ್ರಾಮ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಗಾಂಧಿವೃತ್ತ , ಬಸವೇಶ್ವರ ವೃತ್ತ ಮಾರ್ಗವಾಗಿ ತಹಸಿಲ್ದಾರ್ ಕಚೇರಿವರೆಗೆ ನಡೆಯಿತು.
ತಹಶೀಲ್ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಸಿಲ್ದಾರ್ ಮೂಲಕ ಸಲ್ಲಿಸದರು.
ಮುಖಂಡರಾದ ಡಿ.ಕೆ ಸಿದ್ರಾಮ ಅವರು ಮಾತನಾಡಿ ಪ್ರಮುಖ ಬೇಡಿಕೆಗಳಾದ ರೈತರ ಬೆಳೆ ಹಾನಿಗೆ ಪ್ರತಿ ಎಕರೆಗೆ 25 ಸಾವಿರ ರೂಪಾಯಿಗಳ ಪರಿಹಾರ ನೀಡಬೇಕು. ಬೆಳೆ ವಿಮೆ ಕಂಪನಿಗಳ ಜೊತೆ ಸಭೆ ನಡೆಸಿ ಕೂಡಲೇ ರೈತರಿಗೆ ಹೆಚ್ಚಿನ ಬೆಳೆ ವಿಮೆ ಸಿಗುವಂತೆ ಮಾಡಬೇಕು.ಬೆಳೆ ವಿಮೆ ಕಂಪನಿಯವರು ರೈತರಿಂದ ಹಣ ವಸೂಲಿ ಮಾಡುವುದು, ದಲ್ಲಾಳಿ ಕೆಲಸ ಮಾಡುವುದು ಕೂಡಲೇ ತಪ್ಪಿಸಬೇಕು. ಕಾರಂಜಾ ಜಲಾಶಯದಿಂದ ನೀರು ಬಿಟ್ಟಾಗ ಸಾಕಷ್ಟು ಸಮಸ್ಯೆಗೆ ಒಳಗಾಗುತ್ತಿರುವ ದಾಡಗಿ, ನೀಡೆಬನ-ಆನಂದವಾಡಿ ಮತ್ತು ಇಂಚೂರ ಸೇತುವೆಗಳ ಎತ್ತರ ಹೆಚ್ಚಿಸಬೇಕು.ತಾಂತ್ರಿಕ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವ ಕೊಂಗಳಿ ಸೇತುವೆ ಬಳಿ ತಡೆಗೋಡೆ ನಿರ್ಮಿಸಬೇಕು.ಬೀದರ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರು ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ 500 ಕೋಟಿ ರೂಪಾಯಿಗಳ ಅನುದಾನ ಕೇಳಿದ್ದು, ಸದರಿ ಹಣ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಮಂಜೂರು ಮಾಡಿಸಿಕೊಂಡು ಬಂದು ಸಂಪೂರ್ಣ ಹಣ ರೈತರಿಗೆ ನೀಡಲು ಮುಂದಾಗಬೇಕು.
ಸರಕಾರದಿಂದ 100 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಕೂಡಲೇ ಪುನರ ಆರಂಭಿನಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಈ ಬೇಡಿಕೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಜಿಲ್ಲಾ ನವಚೈತನ್ಯ ಸೇವಾ ಸಮಿತಿ ಅಗ್ರಹಿಸುತ್ತದೆ. ಸಮಸ್ಯೆಗೆ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಸತ್ಯಾಗ್ರಹ ನಡೆಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಶರದ್ ದುರ್ಗಾಳೆ ನುಡಿದರು.
ಪ್ರತಿಭಟನೆಯಲ್ಲಿ ಕಿಶನರಾವ ಪಾಟಿಲ ಇಂಚೂರಕರ, ಗುಣವಂತರಾವ ಶಿಂದೆ, ಕೆ ಡಿ ಗಣೇಶ, ಜೈರಾಜ ಕೊಳ್ಳ, ಕೈಲಾಶ ಪಾಟೀಲ, ಶರದ ಪಾಟೀಲ, ಶಿವಕುಮಾರ ಸಜ್ಜನಶೆಟ್ಟಿ, ಶಿವಾಜಿ ಮೇತ್ರೆ, ವಿನೋದ ಕಾರಾಮುಂಗೆ , ಬಿಬಿಶನ ಬಿರಾದಾರ , ಶಿವು ಅಣದುರೆ, ಸಂಗಮೇಶ ಟೆoಕಾಳೆ, ಕೈಲಾಶ ಪಾಟಿಲ ಶಿವಣಿ, ಸಂದೀಪ ಪರಶಣ್ಣೆ, ಮಲ್ಲಪ್ಪ ದೇಶಮುಖ, ರಾಜಶೇಖರ ಶೇರಿಕರ, ಶ್ರೀಧರ ಶಿರ್ಸೆ , ಸುಕೇಶ ರೆಡ್ಡಿ, ನವನಾಥ ಪಾಟೀಲ, ಸುಭಾಷ ಮಾಶೆಟ್ಟೆ, ಭಾಸ್ಕರ ಪವಾರ, ಜಗದೀಶ ಬಿರಾದಾರ, ಸಂಗಮೇಶ ಭುರೆ, ಸೋಮನಾಥ ಟೋಕರೆ, ಪ್ರಶಾಂತ ಮೊರೆ, ಕನಕ ಮಲ್ಲೇಶಿ, ಗಣೇಶ ಪಾಟಿಲ ಸೇರಿದಂತೆ ಅನೇಕ ಗ್ರಾಮಗಳಿಂದ ಆಗಮಿಸಿದ ರೈತರು ಉಪಸ್ಥಿತರದ್ದರು.
ವರದಿ : ಸಂತೋಷ ಬಿಜಿ ಪಾಟೀಲ್




