ಮೊಳಕಾಲ್ಮೂರು : ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಕ್ಷೇತ್ರದ ಪ್ರತಿಯೊಂದು ಹಳ್ಳಿಗಳ ಪ್ರವಾಸ ಮಾಡುತ್ತಿದ್ದು ಯಾವುದೇ ಸಮಸ್ಯೆಗಳು ಗಮನಕ್ಕೆ ಬಂದರೂ ಪರಿಷ್ಕರ ಮಾಡಿ ಕೊಡಬೇಕು ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಎನ್ ವೈ ಪಿ ಚೇತನ್ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಹೆಚ್ಚರಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧುವಾರ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಮೊಳಕಾಲ್ಮುರು ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ಇರುವ ಪ್ರತಿಯೊಬ್ಬ ನಾಗರಿಕರಿಗೆ ಪಂಚ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಬಾರದು. ಕೆಲವೊಂದು ಹಳ್ಳಿಗಳಲ್ಲಿ ನಾಗರೀಕರಿಗೆ ಬೆಸ್ಕಾಂ ಇಲಾಖೆಯಿಂದ ಹೆಚ್ಚಿನ ಬಿಲ್ ಬರುತ್ತಿದ್ದು ಅಧಿಕಾರಿಗಳು ಗಮನಿಸಬೇಕು. ಸಿ ಡಿ ಪಿ ಒ ಇಲಾಖೆ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ವಿನಯ್ ಕುಮಾರ್ ಮಾತನಾಡಿ ನಮ್ಮ ಇಲಾಖೆಯು ಬೇರೆ ತಾಲ್ಲೂಕಿಗೆ ಹೋಲಿಸಿದರೆ ಹೆಚ್ಚಿನ ಪ್ರಗತಿ ಹೊಂದಿದ್ದೇವೆ ಆದರೂ ನಾವು ಶ್ರಮವಹಿಸಿ 100% ಸಂಪೂರ್ಣ ಕೆಲಸ ಮಾಡಲು ಪ್ರಯತ್ನ ಪಡುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕರು ಗಣೇಶ ಮಾತನಾಡಿ ಜಿಲ್ಲಾ ಸಮಿತಿ ಶಿಫಾರಸ್ಸು ಮೇರೆಗೆ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಷ್ಕರಣೆ ಮಾಡಿಕೊಡಬೇಕು ಎಂದು ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ವಿಜಯ್ ಕುಮಾರ್ ಮಾತನಾಡಿ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಬೀದಿ ದೀಪ ಹಗಲು ಹೊತ್ತಿನಲ್ಲಿ ಉರಿಯುತ್ತಿದ್ದರೂ ಬೆಸ್ಕಾಂ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಮೌನವಹಿಸಿದ್ದಾರೆ, ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಬೆಸ್ಕಾಂ ಇಲಾಖೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಾರಂಭ ಮಾಡುವ ಮೊದಲು ಆಯಾ ಮನೆಗಳಲ್ಲಿ ಬಳಸಿದ ಯೂನಿಟ್ ಗೆ ಹೆಚ್ಚುವರಿಯಾಗಿ 10% ಯೂನಿಟ್ ಮಾತ್ರ ನಾವು ಪ್ರತಿ ತಿಂಗಳು ಬಳಸಬಹುದು, ಅದಕ್ಕಿಂತ ಹೆಚ್ಚು ಯೂನಿಟ್ ಬಳಸಿದರೆ ಗೃಹ ಜ್ಯೋತಿ ಬಳಸುವ ಗ್ರಾಹಕರೇ ಕಟ್ಟಬೇಕು, ನೀವು ಯಾವುದೇ ಕಾರಣಕ್ಕೂ200 ಯೂನಿಟ್ ಬಳಸುವಂತಿಲ್ಲ. ಕಣಕುಪ್ಪೆ ಗ್ರಾಮದ ಹತ್ತಿರ ಒಂದು ಬೆಸ್ಕಾಂ ಪವರ್ ಯೂನಿಟ್ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರತಿಹಳ್ಳಿಯಲ್ಲಿ ಲೈನ್ ಮ್ಯಾನ್ ಇರಲು ತಿಳಿಸುತ್ತೇನೆ ಎಂದು ಬೆಸ್ಕಾಂ ಇಲಾಖೆ ಆಧಿಕಾರಿ ಚಂದ್ರಕಾಂತ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಸಿದ್ದಬಸಪ್ಪ ಮಾತನಾಡಿ ಶ್ರೀ ಶಕ್ತಿ ಯೋಜನೆ ಸಂಪೂರ್ಣ ಯಶಸ್ವಿಯಾಗಲು ನಮ್ಮ ತಾಲ್ಲೂಕಿನ ಹನುಮನ ಗುಡ್ಡ ಸಂತೆ ಗುಡ್ಡ ಬಂಡ್ರಾವಿ ಮಾರ್ಗವಾಗಿ ರಾಂಪುರಕ್ಕೆ ಬಸ್ ಬರಬೇಕು ಹಾಗೂ ಬಳ್ಳಾರಿಯಿಂದ ತಮ್ಮೆನಹಳ್ಳಿ ಕೋನಪುರ ಕ್ರಾಸ್, ರಾಂಪುರ, ಸಿದ್ದಾಪುರ, ನಾಗಸಮುದ್ರ, ಬೈರಾಪುರ, ಕೆಳಗಳ ಹಟ್ಟಿ ಮಾರ್ಗವಾಗಿ ಮೊಳಕಾಲ್ಮುರು ಬಸ್ ಬರಬೇಕು ಎಂದು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರು ನಂದೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಧಿಕಾರಿ ವಿನಯ್ ಕುಮಾರ್, ಬೆಸ್ಕಾಂ ಇಲಾಖೆ ಚಂದ್ರ ಕಾಂತ ರೆಡ್ಡಿ, ಆಹಾರ ಇಲಾಖೆ ಗೀತಾ0ಜಿನೇಯ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರುಗಳಾದ ಪಾಲಯ್ಯ, ಲೋಕೇಶ್ ಪಲ್ಲವಿ, ಗೋವಿಂದಪ್ಪ, ಸಿದ್ದಬಸಪ್ಪ, ವಿಜಯ್ ಕುಮಾರ್, ಸುರೇಶ್ ರಾಯಪುರ, ನರಸಿಂಹ ರೆಡ್ಡಿ, ಮಹಮ್ಮದ್ ರಫೀ, ಇಸ್ಮಾಯಿಲ್, ಕೃಷ್ಣಪ್ಪ ಹಾಗೂ ಹನುಮಾಪುರ ಹನುಮಂತಪ್ಪ ಭಾಗವಹಿಸಿದ್ದರು.




