ಸಿಂಧನೂರು : ಸೆಪ್ಟಂಬರ್ 10, ನಮ್ಮ ಕರ್ನಾಟಕ ಸೇನೆ ತಾಲೂಕ ಸಮಿತಿ ಹಾಗೂ ಜಿಲ್ಲಾ ಸಮಿತಿ ವತಿಯಿಂದ ಮಾನ್ಯ ತಹಸಿಲ್ದಾರ್ರವರಿಗೆ ಮನವಿ ಪತ್ರ ಸಲ್ಲಿಸಿದ ತಾಲೂಕಾಧ್ಯಕ್ಷ ಅಂಬಿರಾಜ್ ಮ್ಯಾಕಲ್ ಜಿಲ್ಲಾಧ್ಯಕ್ಷ ಕೆ. ಕೊಂಡಪ್ಪ ಮಾತನಾಡಿ ಸಿಂಧನೂರು ತಾಲೂಕಾಧ್ಯಂತ ಗಾಂಜಾ ಮತ್ತು ಡ್ರಗ್ಸ್ ಸದ್ದಿಲ್ಲದೆ ಮಾರಾಟವಾಗುತ್ತಿದ್ದು ಇದಕ್ಕೆ ಯುವ ಜನರು ದಾಸರಾಗಿದ್ದು ಕಂಡು ಬರುತ್ತವೆ ಇದನ್ನು ನಿಯಂತ್ರಣ ಮಾಡದೆ ಹೋದಲ್ಲಿ ಇದು ಹೆಮ್ಮರವಾಗಿ ಬೆಳೆದು ಯುವಕರು ಇದಕ್ಕೆ ದಾಸರಾಗಿ ಸಮಾಜಕ್ಕೆ ಹೊರೆಯಾಗುತ್ತಾರೆ ಪೊಲೀಸ್ ಅಧಿಕಾರಿಗಳಿಗೆ ಮತ್ತು ಅರಣ್ಯ ಅಧಿಕಾರಿಗಳಿಗೆ ಇದನ್ನು ನಿಯಂತ್ರಿಸಲು ಆದೇಶ ಹೊರಡಿಸಬೇಕೆಂದು ಮಾನ್ಯ ತಸಿಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ. ಕೊಂಡಪ್ಪ. ತಾಲೂಕಾಧ್ಯಕ್ಷ ಅಂಬಿ ರಾಜ್ ಮ್ಯಾಕಲ್. ಭೀಮನಗೌಡ ಎಂ. ಪಾಟೀಲ್. ನಾಗರಾಜ್ ದೊರೆ. ಮುನ್ನ. ಮಹಮ್ಮದ್ ಹುಸೇನ್. ಇನ್ನು ಅನೇಕರಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ




