ಸಿಂಧನೂರು : ಸೆ 10, ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ ಕರ್ನಾಟಕ ಸ್ಟೇಟ್ ಕನಸ್ಟ್ರಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ಸಂಘದ ರಾಜ್ಯಾಧ್ಯಕ್ಷ ಎನ್ ಪಿ. ಸ್ವಾಮಿ ಹಾಗೂ ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷ ಶಂಕರ್ ಘಟ್ಟಿ ಯವರು ಕಾರ್ಮಿಕರ ಪರ ಪ್ರತಿನಿದಿತ್ವವಹಿಸಿ ಮಂಡಳಿಯ ಕಾರ್ಯ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಹಾಗೂ ಮಂಡಳಿಯನ್ನು ಸಬಲೀಕರಣ ಗೊಳಿಸುವುದರಲ್ಲಿ ಅವರು ಅಪರವಾದ ಕೊಡುಗೆಯನ್ನು ನೀಡಿದ್ದಾರೆ ಅದರಂತೆ ಈಗ ಮರಿಯಪ್ಪ ಬಂಡಿ ಆದ ನನ್ನನ್ನು ಕಟ್ಟಡ ಇದ್ದರೆ ಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ .
ನಾನು ಪ್ರಜಾಪ್ರಭುತ್ವದ ಶಿಸ್ತಿನಡಿಯಲ್ಲಿ 9. 9. 2025 ರಿಂದ 8. 9. 2028 ರವರೆಗೆ ಸಿಂಧನೂರು ತಾಲೂಕ ವ್ಯಾಪ್ತಿಯಲ್ಲಿನ ಸಮಸ್ತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರನ್ನು ಸಂಘಟಿಸಲು ನನ್ನ ಪ್ರಾಮಾಣಿಕ ಕರ್ತವ್ಯ ಮಾಡುತ್ತೇನೆ ಹಾಗೂ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಶ್ರಮಿಸಿದ ರಾಜ್ಯಾಧ್ಯಕ್ಷ ಎನ್ ಪಿ. ಸ್ವಾಮಿ. ಲೀಲಾವತಿ ಮೇಡಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಎನ್. ವೀರನಗೌಡ ಜಿಲ್ಲಾಧ್ಯಕ್ಷ ರವರಿಗೆ ನನ್ನ ಧನ್ಯವಾದಗಳು ತಿಳಿಸಿದರು.
ಸಂದರ್ಭದಲ್ಲಿ ಲಕ್ಷ್ಮಣ ಭೋವಿ. ಭೋವಿ ವಡ್ಡರ ಸಂಘದ ತಾಲೂಕ ಅಧ್ಯಕ್ಷ. ರಾಮಣ್ಣ ಕುರಕುಂದಿ ಗೌರವಾಧ್ಯಕ್ಷ. ಉಪಾಧ್ಯಕ್ಷ ಬಸವರಾಜ ಬಡಿಗೇರ್. ಶಿವಕುಮಾರ್ ಬೋವಿ ಪ್ರ. ಕಾರ್ಯದರ್ಶಿ. ಹುಲಿಗೆಪ್ಪ ನವಲಿ. ವೀರೇಶ್ ಸಂಚಾಲಕ. ಪ್ರಕಾಶ್ ಖಜಾಂಚಿ. ವೆಂಕಟೇಶ್ ಕೆ. ಜಂಗಮರಹಟ್ಟಿ ಇನ್ನೂ ಅನೇಕರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




