ಸಿಂಧನೂರು : ಸೆ.11 ಸಿರತ್ ಸಮಿತಿ ಸಿಂಧನೂರು ವತಿಯಿಂದ ಪ್ರವಾದಿ ಮೊಹಮ್ಮದರ 115ನೇ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ತಪಾಸಣಾ ಕಾರ್ಯಕ್ರಮದಲ್ಲಿ ಪ್ರವಾದಿ(ಸ) ಜೀವನ ಹಾಗೂ ಸಂದೇಶ ಕಾರ್ಯಕ್ರಮ 9 ಸಪ್ಟೆಂಬರ್ 2025 ರಂದು ನಗರದ ಮಿಲಪ್ ಶಾದಿ ಮಹಲ್ ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ : ಶ್ರೀ ಮಾದಯ್ಯ ಗುರುವಿನ್ ಅಮೋಘಸಿದ್ದೇಶ್ವರ ಮಠ ತುರುವಿಹಾಳ ಹಾಗೂ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತ ಮಠ ಒಳಬಳ್ಳಾರಿ ದಿವ್ಯ ಸಾನಿಧ್ಯ ವಹಿಸಿದ್ದರು ಕಾರ್ಯಕ್ರಮದ ಅಧ್ಯಕ್ಷತೆ: ಜನಾಬ್ ಸೈಯ್ಯದ್ ಸಾಧಿಕ್ ಹುಸೇನಿ (ಬಾಬರ್ ಪಾಷ) ವಹಿಸಿಕೊಂಡಿದ್ದರು ಈ ಸಂದರ್ಭದಲ್ಲಿ ಡಾ. ನಾಗರಾಜ್ ಕಾಟ್ವ. ಡಾ. ಚನ್ನನಗೌಡ ಪಾಟೀಲ್ ನೇತ್ರ ತಜ್ಞರು. ಸೋಮನಗೌಡ ಬಾದರ್ಲಿ ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕರು. ದೊಡ್ಡ ಬಸವರಾಜ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರು. ಆರೋನ್ ಪಾಷಾ. ಜಾಫರ್ ಜಾಗಿರ್ದಾರ್. ನದೀ ಮುಲ್ಲಾ. ಶಫಿವುಲ್ಲಾ ಖಾನ್ ಇನ್ನೂ ಅನೇಕರು ಉಪಸ್ಥಿತಿ ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ




