ದುಬೈ ( ಭಾರತ ಕ್ರಿಕೆಟ್ ತಂಡವು ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಕಂಡಿದೆ.
ಯುನೈಟೆಡ್ ಅರಬ್ ಎಮಿರೆಟ್ಸ್ ವಿರುದ್ಧ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ಯುನೈಟೆಡ್ ಅರಬ್ ಎಮಿರೆಟ್ಸ್ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿತು.
ಮೊದಲು ಬ್ಯಾಟ್ ಮಾಡಿದ ಯುನೈಟೆಡ್ ಎಮಿರೆಟ್ಸ್ ತಂಡವು 13.1 ಓವರುಗಳಲ್ಲಿ 57 ರನ್ ಗೆ ಆಲೌಟಾಯಿತು. ಸುಲಭ ಗೆಲುವಿನ ಗುರಿ ಪಡೆದ ಭಾರತ ತಂಡವು 4.3 ಓವರುಗಳಲ್ಲಿ 1 ವಿಕೆಟ್ ಗೆ 60 ರನ್ ಗಳಿಸಿ ನಿರಾಯಾಸ ಜಯ ಸಂಪಾದಿಸಿತು.
ಸ್ಕೋರ್ ವಿವರ
ಯುನೈಟೆಡ್ ಅರಬ್ ಎಮಿರೆಟ್ಸ್ 13.1 ಓವರುಗಳಲ್ಲಿ 57
ಅಲಿಶಾನ್ ಶರಫು 22 (17 ಎಸೆತ, 3 ಬೌಂಡರಿ, 1 ಸಿಕ್ಸರ್) , ಮೊಹ್ಮದ್ ವಸೀಮ್ 19 ( 22 ಎಸೆತ, 3 ಬೌಂಡರಿ)
ಕುಲದೀಪ್ ಯಾದವ್ 7 ಕ್ಕೆ 4, ಶಿವಂ ದುಬೈ 4 ಕ್ಕೆ 3)
ಭಾರತ ತಂಡ 4.3 ಓವರುಗಳಲ್ಲಿ 1 ವಿಕೆಟ್ ಗೆ 60
( ಅಭಿಷೇಕ್ ಶರ್ಮಾ 30 ( 16 ಎಸೆತ, 2 ಬೌಂಡರಿ, 3 ಸಿಕ್ಸರ್)
ಶುಭಮಾನ್ ಗಿಲ್ 20 ( 9 ಎಸೆತ, 2 ಬೌಂಡರಿ, 1 ಸಿಕ್ಸರ್)




