ಬೆಂಗಳೂರು: ಇಲ್ಲಿ ನಡೆದಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಮೊದಲ ದಿನವೇ ದಕ್ಷಿಣ ವಲಯ ಕೇಂದ್ರ ವಲಯದ ವಿರುದ್ಧ 149 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಇಲ್ಲಿನ ಬಿಸಿಸಿಐ ಎಕ್ಸಲೆನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ವಲಯದ ಪರವಾಗಿ ತನ್ಮಯ ಅಗರವಾಲ್ 31 ರನ್ ಗಳಿಸಿದ್ದು, ತಂಡದ ಪರವಾಗಿ ಮೂಡಿ ಬಂದ ವೈಯಕ್ತಿಕ ದೊಡ್ಡ ಮೊತ್ತವಾಗಿತ್ತು. ಕೇಂದ್ರ ವಲಯದ ಪರವಾಗಿ ಶರನ್ಸ್ ಜೈನ್ 49 ಕ್ಕೆ 5 ಹಾಗೂ ಕುಮಾರ್ ಕಾರ್ತಿಕೆಯ್ 53 ಕ್ಕೆ 4 ವಿಕೆಟ್ ಪಡೆದರು.




