ಬೈಲಹೊಂಗಲ : 2025-26 ನೇ ಸಾಲಿನ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಬಾಲಕರ 4X400 ರಿಲೇ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕರ ವಿಭಾಗದಲ್ಲಿ ಮುತ್ತುರಾಜ ಜೋಗಿಗುಡ್ಡ 1500 ಮೀ ಓಟದಲ್ಲಿ ಪ್ರಥಮ, ಕಲ್ಮೇಶ ಗುಡ್ಡದ 3000 ಮೀ ಓಟದಲ್ಲಿ ದ್ವಿತೀಯ, ಬಸವರಾಜ ಕುರಿ 200 ಮೀ ಓಟ ಪ್ರಥಮ, ಎತ್ತರ ಜಿಗಿತ ದ್ವಿತೀಯ, ಸಮಗ್ರ ವೀರಾಗ್ರಣಿ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಉತ್ತಮ ಸಾಧನೆಗೆ ಮುಖ್ಯ ಶಿಕ್ಷಕರಾದ ಎನ್.ಆರ್.ಠಕ್ಕಾಯಿ, ಶಿಕ್ಷಕರಾದ ಜೆ.ಆರ್.ನರಿ, ಎಸ್.ವಿ.ಬಳಿಗಾರ, ಎಚ್.ವಿ.ಪುರಾಣಿಕ, ಎಮ್.ಎನ್.ಕಾಳೆ, ವೀರೇಂದ್ರ ಪಾಟೀಲ, ಸಂತೋಷ ಸಾಳುಂಕೆ, ಹಾಗೂ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಎಸ್.ಗುರುನಗೌಡರ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದರು.
ವರದಿ : ದುಂಡಪ್ಪ ಹೂಲಿ




