Ad imageAd image

 ಅಧಿಕಾರಿಗಳೇ ಈ ರಸ್ತೆ ನೋಡಿ ಬನ್ನಿ

Bharath Vaibhav
 ಅಧಿಕಾರಿಗಳೇ ಈ ರಸ್ತೆ ನೋಡಿ ಬನ್ನಿ
WhatsApp Group Join Now
Telegram Group Join Now

ಚಾಮರಾಜನಗರ : ಹನೂರು ಪಟ್ಟಣದ ಲೊಕ್ಕನಹಳ್ಳಿಗೆ ತೆರಳುವ ಗೌತಮ್ ಶಾಲೆಯ ಬಳಿ ಹಾದುಹೋಗುವ ಮುಖ್ಯ ರಸ್ತೆಯ ಗುಂಡಿಗಳಲ್ಲಿ ನೀರು ನಿಂತಿದ್ದು ಸಂಚಾರಿಸಲು ಕಷ್ಟದ ಪರಿಸ್ಥಿತಿ ಎದುರಾಗಿದೆ.

ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದು ಈ ರಸ್ತೆಯು ಲೊಕ್ಕನಹಳ್ಳಿ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಹೆದ್ದಾರಿಯಾಗಿದ್ದು.

ರಸ್ತೆಯ ಪಕ್ಕ ಗೌತಮ್ ಶಾಲೆಯಿಂದು ಸುತ್ತಮುತ್ತಲ ಹಳ್ಳಿಗಳಿಂದ ನೂರಾರು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ.

ರಸ್ತೆಯು ಸುಮಾರು ವರ್ಷದಿಂದ ಸಂಪೂರ್ಣ ಹದಗೆಟ್ಟಿದ್ದು, ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದೆ.

ಮಳೆ ಬಂದ ವೇಳೆ ನೀರು ಹಲವು ದಿನಗಳವರೆಗೆ ನಿಲ್ಲುತ್ತದೆ.

ಜಲ್ಲಿಕಲ್ಲುಗಳು ರಸ್ತೆಗೆ ಹರಡಿದೆ ಗುಂಡಿಗಳನ್ನು ತಪ್ಪಿಸಲು ಹೋಗಿ ಬೈಕ್‌ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆಯುತ್ತಲೇ ಇದೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ಗೌತಮ್ ಶಾಲೆಯ ಬಳಿ ರಸ್ತೆಯ ಗುಂಡಿಯಲ್ಲಿ ನೀರು ನಿಂತಿದ್ದು, ವಿದ್ಯಾರ್ಥಿಗಳು ಸಂಚರಿಸಲು ಪರದಾಡುತ್ತಿರುವುದು.

ರಸ್ತೆ ಅಭಿವೃದ್ಧಿಪಡಿಸು ವಂತೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಶಾಲಾ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!