ಸೇಡಂ: ಈ ವರ್ಷ ಉತ್ತಮ ಮುಂಗಾರು ಮಳೆ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ನಡೆದಿತ್ತು. ಆದರೆ, ಮೂರ್ನಾಲ್ಕು ವಾರಗಳ ಮಧ್ಯೆ ಮಳೆ ಬಾರದ ಕಾರಣ ಹಲವೆಡೆ ಬೆಳೆ ಒಣಗಿತ್ತು. ಕೆಲವು ಭಾಗಗಳಲ್ಲಿ ರೈತರು ಮರು ಬಿತ್ತನೆಯನ್ನು ಕೂಡ ಮಾಡಿದರು.
ಅದರ ಬೆನ್ನಲ್ಲೇ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಳೆಯಾಗಿರುವ ಕಾರಣ ಅತಿವೃಷ್ಟಿಯಿಂದಾಗಿ ವ್ಯಾಪಕ ಪ್ರಮಾಣದಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಿದರೆ ರೈತರಿಗೆ ರಿಲೀಫ್ ಸಿಗುವುದಿಲ್ಲ. ಅದ ಕಾರಣ ಪರಿಹಾರ ಮೊತ್ತ ಹೆಚ್ಚಳ ಮಾಡಿ ಹಾಗೂ ಶೀಘ್ರದಲ್ಲೇ ರೈತರಿಗೆ ಅನುಕೂಲ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ತಾಲೂಕ ಕಾರ್ಯಾಧ್ಯಕ್ಷರಾದ ಸಾಬಪ್ಪ ಅಬ್ಬಗಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ಸರಕಾರಕ್ಕೆ ಒತ್ತಾಯಿಸಿ ಆಗ್ರಹ ವ್ಯಕ್ತಪಡಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




