
ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲ ವಾರ್ಡಿನ ವ್ಯಾಪ್ತಿಗೆ ಬರುವ ದೊಡ್ಡಣ್ಣ ಕೈಗಾರಿಕಾ ಪ್ರದೇಶದ ಕಂಪನಿ ಮಾಲೀಕರು ಮತ್ತು ಉದ್ಯಮಿಗಳಾದ ಲಿಝೀನ್,ಉದಯ ರವಿ, ಉಮಾ ಶಂಕರ್, ಕೃಷ್ಣಮೂರ್ತಿ, ನಾಗರಾಜ್, ಮಾರುತಿ, ರವಿ ಇವರುಗಳ ನೇತೃತ್ವದಲ್ಲಿ ಉದಯ ಕಂಪನಿ ಹತ್ತಿರ ಬೃಹತ್ ಆಕಾರದ ಶ್ರೀ ಬಲಗುರಿ ಗಣೇಶ ಸ್ಥಾಪಿಸಿ ವಿದ್ವಾನ್ ಪುರೋಹಿತರಿಂದ ಪೂಜಾ ಪುನಸ್ಕಾರಗಳು ಮಹಾಮಂಗಳಾರತಿ ಹೊಮಹವನಾದಿಗಳು ಜರುಗಿದವು. ನಂತರ ಅನ್ನ ಸಂತರ್ಪಣೆ ನಡೆಯಿತು.
ಕ್ಷೇತ್ರದ ಶಾಸಕ ಎಸ್ ಮುನಿರಾಜು, ಮಾಜಿ ಪಾಲಿಕೆ ಸದಸ್ಯ ಹೆಚ್. ಎನ್ ಗಂಗಾಧರ್, ಬಿಜೆಪಿ ಮಾಜಿ ಅಧ್ಯಕ್ಷರಾದ ಕಣ್ಣಪ್ಪ, ಹರೀಶ್, ಬಿಜೆಪಿ ಮುಖಂಡ ಡಾ. ನಾಗೇಶ್ ಕುಮಾರ್, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ದಾನಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್, ಜೆಡಿಎಸ್ ಮುಖಂಡ ಸುರೇಶ್ ಸಿಮೆಂಟ್, ಆನಂದ್ ಸಪ್ತಗಿರಿ ಸೇರಿದಂತೆ ಮುಂತಾದವರು ಗಣೇಶನ ದರ್ಶನ ಪಡೆದರು.
ದೊಡ್ಡಣ್ಣ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆ ಮೂಲಕ ವಿವಿಧ ಕಲಾತಂಡಗಳಿಂದ ಗಣೇಶನ ಮೆರವಣಿಗೆ ನಡೆಯಿತು ಎಂದು ಕೈಗಾರಿಕಾ ಉದ್ಯಮಿ ಹಾಗೂ ಯುವ ಮುಖಂಡ ಲಿಝೀನ್ ಅವರು ಬಿ ವಿ ನ್ಯೂಸ್-5 ಗೆ ತಿಳಿಸಿದ್ದಾರೆ.
ವರದಿ: ಅಯ್ಯಣ ಮಾಸ್ಟರ್




