Ad imageAd image

ಭಟ್ಕಳದಲ್ಲಿ ಗೋವುಗಳ ನರಮೇಧ ಶಂಕೆ : ನೂರಾರು ಹಸುಗಳ ಎಲುಬುಗಳು ಪತ್ತೆ

Bharath Vaibhav
ಭಟ್ಕಳದಲ್ಲಿ ಗೋವುಗಳ ನರಮೇಧ ಶಂಕೆ : ನೂರಾರು ಹಸುಗಳ ಎಲುಬುಗಳು ಪತ್ತೆ
WhatsApp Group Join Now
Telegram Group Join Now

ಭಟ್ಕಳ : ಭಟ್ಕಳದಲ್ಲಿ ನೂರಾರು ಹಸುಗಳ ಎಲುಬುಗಳು ಪತ್ತೆಯಾಗಿದ್ದು, ಗೋವುಗಳ ನರಮೇಧ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಉತ್ತರ ಕರ್ನಾಟಕ ಜಿಲ್ಲೆಯ ಭಟ್ಕಳ ಪಟ್ಟಣದ ಮುಗ್ಗುಮ್ ಕಾಲನಿಯ ಗುಡ್ಡದ ಅರಣ್ಯ ಇಲಾ ಖೆಗೆ ಸೇರಿದ ಜಾಗದಲ್ಲಿ ಹಲವು ಜಾನುವಾರುಗಳ ಮೂಳೆಗಳು, ಅಸ್ಥಿಪಂಜರಗಳು ಪತ್ತೆ ಆಗಿವೆ.

ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಹಿಂದೂ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ಈ ಸ್ಥಳದಲ್ಲಿ ಹಲವು ದಿನಗಳಿಂದ ಜಾನುವಾರು ಹತ್ಯೆ ನಡೆಯುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮವಾಗಿ ಗೋವುಗಳನ್ನು ಭಟ್ಕಳಕ್ಕೆ ತಂದು ಹತ್ಯೆ ಮಾಡಲಾಗುತ್ತಿದೆ. ಕೂಡಲೇ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!