ಚಿಕ್ಕಬಳ್ಳಾಪುರ :ಭಾರತ ರತ್ನ ಡಾ. ಸರ್ವೇಪಲ್ಲಿ ರಾಧಾಕೃಷ್ಣನವರ 138ನೇ ಜನ್ಮ ದಿನಾಚರಣೆಯ ಪ್ರಯುಕ್ತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ಶಾಲಾ ಶಿಕ್ಷಣ ಇಲಾಖೆ ಶಿಕ್ಷಕರ ದಿನಾಚರಣೆಯ ಸಮಿತಿ ಬಾಗೇಪಲ್ಲಿ ಹಾಗೂ ಖಾಸಗಿ ಶಾಲೆಗಳ ಒಕ್ಕೂಟದಿಂದ ಡಾll ಸರ್ವೇಪಲ್ಲಿ ರಾಧಾಕೃಷ್ಣ ರವರ 138ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಡಾll ರಾಧಾಕೃಷ್ಣ ನವರ ಭಾವಚಿತ್ರಗಳನ್ನು ಇಟ್ಟು ಬೆಳ್ಳಿ -ರಥ ದಲ್ಲಿ, ತಮಟೆ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಸಮಸ್ತ ಶಿಕ್ಷಕ ವೃಂದದವರು ಜೈಕಾರಗಳನ್ನು ಕೂಗುತ್ತ, ಸಭಾಂಗಣಕ್ಕೆ ಬಂದರು, ನಂತರ ಬಾಗೇಪಲ್ಲಿ ಕ್ಷೇತ್ರದ ಜನಪ್ರಿಯ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಹಾಗೂ ಎಂ.ವಿ.ರಾಮಕೃಷ್ಣ ಪ್ರಸಾದ್ ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಧಿಕಾರಿಗಳಾದ ಎನ್ ವೆಂಕಟೇಶಪ್ಪ, ತಹಸೀಲ್ದಾರ್ ಮನೀಶ ಇನ್ನು ಗಣ್ಯರು ಸೇರಿ ಜ್ಯೋತಿ ಬೆಳೆಗಿಸುವ ಮೂಲಕ ರಾಧಾಕೃಷ್ಣ ರವರ ಭಾವಚಿತ್ರಕ್ಕೆ ಪುಷ್ಪ ನಮನೆ ಸಲ್ಲಿಸಿದರು, ನಂತರ ಸಭೆಯನ್ನು ಕುರಿತು ರಾಧಾಕೃಷ್ಣ ನವರ ಹಿತ -ನುಡಿಗಳನ್ನು ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ರವರು ಗಣ್ಯರಲ್ಲಿ ಹಂಚಿಕೊಂಡರು.

ಅದೇ ರೀತಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿ ಮಾಡುವ ಆಸೆ ಇದೇ, ಅಲ್ಲದೇ ಗುರುಭವನಕ್ಕೆ ಶಂಕುಸ್ಥಾಪನೆ ಮಾಡಿದ್ದು ನಂತರ ಮುಂದೆ ಬರುವ ವರ್ಷಗಳಲ್ಲಿ ಗುರುಭವನದಲ್ಲಿಯೇ ಶಿಕ್ಷಕರ ದಿನಾಚರಣೆಯನ್ನು ಮಾಡುವುದಾಗಿ ತಿಳಿಸಿದರು, ಶಿಕ್ಷಕರ ಮಹತ್ವದ ಬಗ್ಗೆ ಹಂಚಿದರು,ಕ್ಷೇತ್ರ ಶಿಕ್ಷಣಧಿಕಾರಿ ಎನ್ ವೆಂಕಟೇಶಪ್ಪ ರವರು ಮಾತನಾಡಿ ಶೈಕ್ಷಣಿಕ ಗುಣಮಟ್ಟ ಶಿಕ್ಷಣ ನಾವು ಕೈ ಜೋಡಿಸುತ್ತೇವೆ ಎಂದು ಗುರುವಿನ ಮಹತ್ವದ ಬೆಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಆಡಳಿತಧಿಕಾರಿ ಅತಿಕ್ ಪಾಷ, ಕ್ಷೇತ್ರ ಸಮನ್ವಯ ಅಧಿಕಾರಿ ಆರ್. ವೆಂಕಟರಾಮಪ್ಪ, ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅನುಮಂತರೆಡ್ಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ, ವೆಂಕಟರಮಣಪ್ಪ, ಎಲ್ಲಾ ಶಿಕ್ಷಣ ಸಂಘಗಳ ಪದಾಧಿಕಾರಿಗಳು ಸದಸ್ಯರು ತಾಲ್ಲೂಕು ಹಂತದ ಅಧಿಕಾರಿಗಳು ಶಿಕ್ಷಕರು crp ಗಳು ಮತ್ತು ಸಾರ್ವಜನಿಕರು ಹಾಜರಿದ್ದರು.
ವರದಿ :ಯಾರಬ್. ಎಂ.




