Ad imageAd image

ಸ್ವಾರ್ಥಕ್ಕಾಗಿ ಈದ್ಗಾ ಮೈದಾನ ಗಣೇಶೋತ್ಸವ ಕಾರ್ಯಕ್ರಮ ಬಳಕೆ: ರಾಜು ಅನಂತ ಸಾ ನಾಯಕವಾಡಿ ಆಕ್ರೋಶ

Bharath Vaibhav
ಸ್ವಾರ್ಥಕ್ಕಾಗಿ ಈದ್ಗಾ ಮೈದಾನ ಗಣೇಶೋತ್ಸವ ಕಾರ್ಯಕ್ರಮ ಬಳಕೆ: ರಾಜು ಅನಂತ ಸಾ ನಾಯಕವಾಡಿ ಆಕ್ರೋಶ
WhatsApp Group Join Now
Telegram Group Join Now

ಹುಬ್ಬಳ್ಳಿ: ನಗರದ ಐತಿಹಾಸಿಕ ಹಾಗೂ ವಿವಾದಾತ್ಮಕ ಈದ್ಗಾ ( ರಾಣೆ ಚೆನ್ನಮ್ಮ ) ಮೈದಾನದಲ್ಲಿ ಆಚರಣೆ ಮಾಡಿರುವ ಗಣೇಶೋತ್ಸವ ದಿನದಿಂದ ದಿನಕ್ಕೆ ಕೇಲವೇ ಕೇಲವರು ಹಾಗೂ ಒಂದು ಪಕ್ಷ ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಸ್ಪರ್ಧೆ ಮಾಡಿದ್ದ ನಾಯಕ ರಾಜು ಅನಂತ ಸಾ ನಾಯಕವಾಡಿ ಗಂಭೀರ ಆರೋಪ ಮಾಡಿದರು.

ಈ ಕುರಿತು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಈದ್ಗಾ ಮೈದಾನಕ್ಕೆ ರಾಷ್ಟ್ರಧ್ವಜ ಹಾರಿಸಲು ಸಾಕಷ್ಟು ಹೋರಾಟ ನಡೆಸಲಾಯಿತು. ‌ಈ ಹೋರಾಟದಲ್ಲಿ ಅನೇಕರು ಪ್ರಾಣ ಕಳೆದುಕೊಂಡರು. ಕೇಲವರ ಆಸ್ತಿ ಪಾಸ್ತಿ ಸಹ ನಾಶ ಆಯಿತು. ಅಂದಿನ ಐತಿಹಾಸಿಕ ಹೋರಾಟಕ್ಕೆ ಎಸ್ ಎಸ್ ಕೆ ಸಮಾಜದವರ ಹೋರಾಟ ಅವಿಸ್ಮರಣೀಯ. ಮನೆ ಮಠ ಮಕ್ಕಳು ಸಂಬಂದಿಕರನ್ನ ಕಡೆಗಣಿಸಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಟ ಮಾಡಿದರು. ಆದರೆ ಇಂದು ಈ ಮೈದಾನದ ಕೇಲವರ ಕಪಿ ಮುಷ್ಠಿಯಲ್ಲಿದೆ. ಭಾರತೀಯ ಜನತಾ ಪಕ್ಷದ ನಾಯಕರು , ಕಾರ್ಯಕರ್ತರು ಪಕ್ಷ ಹಾಗೂ ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತಿದ್ದಾರೆ.

ಈದ್ಗಾ ಮೈದಾನದ ಗಣೇಶೋತ್ಸವ ಆಚರಣೆಯಲ್ಲಿ ತಮ್ಮ ಸಮಾಜದ ಪ್ರಮುಖರನ್ನ ಯುವಕರನ್ನ ಹಾಗೂ ಸಮಾಜ ಭಾಂಧವರನ್ನ ಕಡೆಗಣಿಸಲಾಗಿದೆ. ಕೇಲವೇ ಕೇಲವರು ಮಾತ್ರ ಅದರಲ್ಲೂ ಬಿಜೆಪಿಯಲ್ಲಿ ಗುರುತಿಸಲ್ಪಡುವವರು ಮಾತ್ರ ಭಾಗವಹಿಸಿದ್ದರು. ಆದರೆ ಮಾಜಿ ಸಂಸದ ಪ್ರತಾಪ್ ಸಿಂಹ್ ಅವರು ಸಹ ತಮ್ಮ ಭಾಷಣದಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ಮಾತನಾಡಿದರು ಇದು ಸರಿಯಾದ ರೀತಿಯಲ್ಲಿ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವರದಿ : ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!