ಚಿಂಚೋಳಿ : ಕಲಬುರ್ಗಿ ಜಿಲ್ಲೆ,ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದ ಬಂಜಾರ ಸಮುದಾಯ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಪ್ರೌಢ ಶಿಕ್ಷಕರ ಸಂಘ ಚಿಂಚೋಳಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ವತಿಯಿಂದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದ ಉದ್ಘಾಟಕರಾಗಿ.ವಿ ಲಕ್ಷ್ಮಯ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿಂಚೋಳಿ ಮುಖ್ಯ ಅಥಿತಿಗಳಾಗಿ ಬಸವರಾಜ್ ಮಲಿ ಅತಿಥಿಗಳಾಗಿ ದೇವೇಂದ್ರಪ್ಪ ಹೋಳ್ಕರ್ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ತಾಲೂಕು ಅಧ್ಯಕ್ಷರು ಚಿಂಚೋಳಿ. ನಾಗಶೆಟ್ಟಿ ಭದ್ರಶಟ್ಟಿ. ನಾರಾಯಣ್ ರೆಡ್ಡಿ.ಜಯಪ್ಪ ಚಾಪೆಲ್ .ಅಶೋಕ್ ಹೂವಿನಬಾವಿ.ಖುರ್ಷಿದಮಿಯಾ.ಸುರೇಶ್ ಕೂರವಿ.ಮಲ್ಲಿಕಾರ್ಜುನ ಪಾಲಾಮೂರ.ಮಾರುತಿ ಪತಂಗೆ.ಶಾಮರಾವ ಮೋಘಾ.ಶಿವಕುಮಾರ್ ಬಿರಾದರ.ಮಾಣಿಕ್ ಪೋಲಾ.ಮಕ್ಸೂದ ಅಲಿ.ಪಾಂಡುರಂಗ ಶರ್ಮಾ.ರಾಜಶೇಖರ ಮುಸ್ತರಿ. ಮುಂತಾದವರು ಉಪಸ್ಥಿತಿಯಿದ್ದರೂ ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಸುರೇಶ್ ಕೊರವಿ. ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನದ ನಿಮಿತ್ಯವಾಗಿ ಶಿಕ್ಷಕರ ದಿನಾಚರಣೆಯನ್ನು ನಾವು ಆಚರಣೆ ಮಾಡುತ್ತೇವೆ.
ಇವತ್ತು ಶಿಕ್ಷಕರ ನಾವು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಒಬ್ಬ ಒಳ್ಳೆಯ ನಾಗರಿಕನಾಗಿ ಮಾಡುವಂತಹ ಜವಾಬ್ದಾರಿ ಒಬ್ಬ ಶಿಕ್ಷಕನಾಗಿದ್ದೆ ಅಂತಹ ಶಿಕ್ಷಕ ವೃತ್ತಿಯನ್ನು ನಾವು ಪಡೆದಿದ್ದಕ್ಕೆ ನಾವು ಧನ್ಯರು, ಆದ್ದರಿಂದ ಆವೃತ್ತಿಯನ್ನು ನಾವು ಉತ್ತಮ ರೀತಿಯಲ್ಲಿ ಮಾಡೋಣ ಎಂದು ಹೇಳಿದರು ನಂತರ ದೇವೇಂದ್ರಪ್ಪ ಹೋಳ್ಕರ್ ಅವರು ಮಾತನಾಡಿ ನಾವು ಶಿಕ್ಷಕ ವೃತ್ತಿಯನ್ನು ಒಳ್ಳೆಯ ವೃತ್ತಿಯಾಗಿ ಆಯ್ಕೆ ಮಾಡೋದಿಕ್ಕೆ ಧನ್ಯರು ನಾವುಗಳು ನಮ್ಮ ಮಕ್ಕಳನ್ನು ನಮಗೆ ಅನ್ನ ಹಾಕುತ್ತಾರೋ ಇಲ್ಲ ಗೊತ್ತಿಲ್ಲ ಆದರೆ ಸರ್ಕಾರ ನಮಗೆ ಮಕ್ಕಳಿಗೆ ಕಲಿಸಲು ಸಂಭಾವನೆ ನೀಡಿದ್ದಾರೆ ಆ ಸಂಭಾವನೆಯಿಂದ ನಮ್ಮ ಕುಟುಂಬವು ನಡೆಯುತ್ತದೆ ನಾವುಗಳು ಮಕ್ಕಳಿಗೆ ಸರಿಯಾದ ರೀತಿಯಿಂದ ಪಾಠ ಪ್ರವಚನ ಬೋಧನೆ ಮಾಡಬೇಕು ಎಂದು ಹೇಳಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತ ವಿ ಲಕ್ಷ್ಮಯ್ಯ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣರವರು ಶಿಕ್ಷಕ ವೃತ್ತಿನ ಆಯ್ಕೆ ಮಾಡಿಕೊಂಡು ಶಿಕ್ಷಕ ವೃತ್ತಿ ಒಂದು ಒಳ್ಳೆಯ ವೃತ್ತಿ , ಆವೃತ್ತಿಯಿಂದ ಇಡೀ ದೇಶವನ್ನೇ ಬದಲಾಯಿಸುವಂತ ಶಕ್ತಿ ಶಿಕ್ಷಕ ವೃತ್ತಿಯಲ್ಲಿದೆ ಅದಕ್ಕಾಗಿ ನಾವು ಶಿಕ್ಷಕ ವೃತ್ತಿಯಲ್ಲಿರುವಂತ ಪ್ರತಿಯೊಬ್ಬ ಶಿಕ್ಷಕ ಮಕ್ಕಳಿಗೆ ಸರಿಯಾದ ರೀತಿಯಿಂದ ಬೋಧನೆ ಮಾಡಬೇಕೆಂದು ಹೇಳಿದರು . ಈ ಸಂದರ್ಭದಲ್ಲಿ ವಿವಿಧ ಶಾಲೆಯ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮಗಳು ಯಶಸ್ವಿಗೊಳಿಸಿದರು.
ವರದಿ : ಸುನಿಲ್ ಸಲಗರ




