ಸೇಡಂ:- ತಾಲೂಕಿನ ಇಟ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಫಾಗಿಂಗ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.
ಅತಿಯಾದ ಮಳೆಯಿಂದ ಅಲ್ಲಲ್ಲಿ ಜಮಾ ಆಗಿರುವ ನೀರಿನಲ್ಲಿ ಕಸದ ರಾಶಿ ಕೂಡ ಸೇರ್ಪಡೆಯಾಗಿದ್ದು ಅದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಡೆಂಗ್ಯೂ, ಮಲೇರಿಯ, ಚಿಕನ್ ಗುನ್ಯಾನಂತ ಕಾಯಿಲೆಗಳು ಹರಡುವ ಸಾದ್ಯತೆ ಇದೆ.
ಆದ್ದರಿಂದ ಮುಂಜಾಗೃತವಾಗಿ ಫಾಗಿಂಗ್ ಮಾಡುವ ಮುಖಾಂತರ ಸೊಳ್ಳೆಗಳ ಕಾಟವನ್ನು ತಪ್ಪಿಸಬಹುದು ಎಂಬ ಉದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಫಾಗಿಂಗ್ ಮಾಡುತ್ತಿರುವ ದೃಶ್ಯ ಕಂಡು ಸ್ಥಳೀಯರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಇಮ್ರಾನ್,
ನರೇಶ ಗೌಡ, ಭೀಮಶಪ್ಪ ನೀರೇಟಿ, ಪ್ರಭಾಕರ್ ಮುನಿ,ಜಗದೀಶ್ ನೀಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




