ಮೊಳಕಾಲ್ಮೂರು : ಚಿನ್ನ ಹಗರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚೆಕ್ ಗ್ರಾಂಗಳಿಂದ ಅಂತರ್ಜಲ ಹೆಚ್ಚು ಅನೇಕ ರೈತರಿಗೆ ಅನುಕೂಲವಾಗುತ್ತದೆ ಎಂದು ಸಂಘದ ಸದಸ್ಯರು ತಿಳಿಸಿದರು. ಚಿಕ್ಕ ಡ್ಯಾಮ್ ವೇಳೆ ವಿರೋಧ ವ್ಯಕ್ತಪಡಿಸಿದವರಿಗೆ ಸೂಕ್ತ ಉತ್ತರ ನೀಡಿದ್ದೇವೆ ಎಂದು ರಂಗೇನದುರ್ಗ ಜಲಶಯದ ಅಚ್ಚುಕಟ್ಟುದಾರರ ಸಂಘದ ಸದಸ್ಯರು ಪತ್ರಕರ್ತರಿಗೆ ತಿಳಿಸಿದರು.
ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸುತ್ತಾ 70ರ ದಶಕದಲ್ಲಿ ಆರಂಭಗೊಂಡ ಜಲಾಶಯವು 33 ಅಡಿ ಎತ್ತರವಿದ್ದು ಅರ್ಧ ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ, 4 ಸಾವಿರ ಎಕರೆ ಅಚ್ಚುಕಟ್ಟುದಾರರ ಕೃಷಿ ಭೂಮಿಗೆ ಆಶ್ರಯವಾಗಿರುವ ಜಲಾಶಯ ಪ್ರಮುಖ ಜಲಮೂಲವಾಗಿರುವ ಚಿನ್ನ ಹಗರಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಮ್ಗಳನ್ನು ನಿರ್ಮಿಸುವಾಗ ಜಲಾಶಯಕ್ಕೆ ನೀರು ಬರುವುದಿಲ್ಲ ಜಲಾಶಯ ಬರ್ತೀಯ ಆಗುವುದಿಲ್ಲ ಎಂದು ಬಹುತೇಕರು ವಿರೋಧ ವ್ಯಕ್ತಪಡಿಸಿದರು.
ಆದರೆ ಎಲ್ಲಾ ಚೆಕ್ದಾಂಗಳು ಬರ್ತಿಯಾಗಿ ಜಲಾಶಯವು ಕಳೆದ ಎರಡು ವರ್ಷಗಳಿಂದ ತುಂಬಿ ಹರಿಯುತ್ತಿದ್ದೆ ಸಿದ್ದಯ್ಯನ ಕೋಟೆ ಏರ್ಪೊತ್ತು ಜೋಗಿಹಳ್ಳಿ, ಸಮೀಪದಲ್ಲಿ ನಿರ್ಮಾಣವಾಗಿರುವ ಚೆಕ್ ಡ್ಯಾಮುಗಳು ಬರ್ತಿಯಾಗಿರುವ ಪರಿಣಾಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಾಗಿ ಅನೇಕ ರೈತರಿಗೆ ಕೃಷಿ ಭೂಮಿಗೆ ನೆರವಾಗಿದೆ. ಮುಂದಿನ ದಿನಗಳಲ್ಲಿ ಶಾಸಕರ ಬಳಿ ನಿಯೋಗ ತೆರಳಿ ಬಾಗಿನ ಅರ್ಪಿಸಲು ಮನವಿ ಮಾಡುತ್ತೇವೆ ಎಂದು ಅಚ್ಚುಕಟ್ಟು ದಾರದ ಸಂಘದ ಅಧ್ಯಕ್ಷ ಅಯ್ಯಣ್ಣ ಹೇಳಿದರು
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ವಿ ಮಾರನಾಯಕ, ನಂಜಪ್ಪ ನಾಯಕ ಬಸವ ನಾಯಕ ಬೋರಣ್ಣ ಹೆಜ್ಜೇನಳ್ಳಿ ನಾಗರಾಜ್ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ : ಪಿಎಂ ಗಂಗಾಧರ




