ಸೇಡಂ : ಮಳಖೇಡ ನಲ್ಲಿ ಅಮೋಘವರ್ಷ ನೃಪತುಂಗ ಅವರ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ದಲಿತ ಸೇನೆ ಮುಖಂಡ ಭಗವಾನ್ ಬೋಚಿನ್ ಮನವಿ ಮಾಡಿದರು.
ಅಮೋಘವರ್ಷ ನೃಪತುಂಗನು 9ನೇ ಶತಮಾನದ ಒಬ್ಬ ಶ್ರೇಷ್ಠ ರಾಷ್ಟ್ರಕೂಟ ಚಕ್ರವರ್ತಿಯಾಗಿದ್ದನು, ಇವರು ಶಾಂತಿ, ಸಾಹಿತ್ಯ ಮತ್ತು ಕಲೆಯನ್ನು ಪ್ರೋತ್ಸಾಹಿಸಿದವರಾಗಿದ್ದರು. ಕವಿರಾಜಮಾರ್ಗವನ್ನು ಬರೆದರು ಮತ್ತು ಜೈನ ಧರ್ಮವನ್ನು ಪೋಷಿಸಿದರು, ಅವರ ಆಡಳಿತವು ರಾಜ್ಯದಲ್ಲಿ ಸ್ಥಿರತೆ ಮತ್ತು ಸಮೃದ್ಧಿಯನ್ನು ತಂದಿತು ಮತ್ತು ಇವರು “ದಕ್ಷಿಣದ ಅಶೋಕ” ಎಂದು ಸಹ ಕರೆಯಲ್ಪಡುತ್ತಾರೆ.
ಏಕೆಂದರೆ ಅಶೋಕರಂತೆ ಅವರ ಶಾಂತಿಪ್ರಿಯ ಸ್ವಭಾವ ಧಾರ್ಮಿಕ ನಂಬಿಕೆಗಳು ಮತ್ತು ಕಲೆಗೆ ನೀಡಿದ ಪ್ರೋತ್ಸಾಹದಿಂದಾಗಿ,ಇಂಥ ಅಮೋಘವರ್ಷ ನೃಪತುಂಗರವರು ನಮ್ಮ ಮಳಕೇಡನಲ್ಲಿ ರಾಜ್ಯ ಆಳ್ವಿಕೆ ಮಾಡಿದರು.
ಅದ ಕಾರಣ ಕೂಡಲೇ ಮಾನ್ಯವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಅಭಿವೃದ್ಧಿ ಉದ್ಯಮಶೀಲತ ಮತ್ತು ಜೀವನೋಪಾಯ ಸಚಿವರಾದ ಡಾಕ್ಟರ್ ಶರಣಪ್ರಕಾಶ್ ಆರ್. ಪಾಟೀಲ್ ಅವರು ಮಳಖೇಡ ನಲ್ಲಿ ಅಮೋಘವರ್ಷ ನೃಪತುಂಗನ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ದಲಿತ ಸೇನೆ ಮುಖಂಡ ಭಗವಾನ್ ಬೋಚಿನ್ ಮನವಿ ಮಾಡಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




