
ಬೆಂಗಳೂರು : ಈಗಿನ ಕಾಲ ಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ತಂತ್ರಜ್ಞಾನ ಅಭ್ಯಾಸ ಅತ್ಯವಶ್ಯಕ ಇದೆ ಎಂದು ಗ್ಯಾರೆಟ್ ಅಡ್ವಾನ್ಸಿಂಗ್ ಮುಖ್ಯಸ್ಥ ಜಾಕರಾಯ್ ಹೇಳಿದರು.
ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದ ಬ್ಯಾಡರಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕ ಶಿಕ್ಷಕಿಯರು ಆಯೋಜಿಸಿದ್ದ ನೂತನವಾಗಿ ಎಸ್ ಟಿ ಇ ಎಂ ಲ್ಯಾಬ್ ರಿಬ್ಬನ್ ಕತ್ತರಿ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳಿಗೆ ನಮ್ಮ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಶಾಲೆ ಅಭಿವೃದ್ಧಿಗೆ ನಮ್ಮ ಸಹಕಾರ ಸಹಾಯ ಸದಾ ಇರುತ್ತದೆ ಇಲ್ಲಿಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ವಿಜ್ಞಾನಿ ಆಗಲಿ ಎಂದು ಜಾಕರಾಯ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

ಸ್ಪೆರೂಲ್ ಫೌಂಡೇಷನ್ ಸಂಯೋಜನಾಧಿಕಾರಿ ತಿಪ್ಪೇಸ್ವಾಮಿ ಅವರು ಎಸ್ ಟಿ ಇ ಎಂ ಲ್ಯಾಬ್ವನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಲಾ ಖ್ಯೋಪಾಧ್ಯಾಯರು ಸರ್ವರಿಗೂ ಸ್ವಾಗತ ಕೋರಿದರು. ಇದೆ ವೇಳೆ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿದರು.
ಈ ಸಂದರ್ಭದಲ್ಲಿ ಅಸ್ವೀಸಿತ ಭಿಸ್ಪಾಸ್, ಜ್ಯೋತಿ ಗಾಕರೆ,ದಿಪ್ತಿ ಸಿಂಗಲೂರು, ವೆಂಕಟಶಿವ ರೆಡ್ಡಿ,ಮುದ್ದನ್ನ್, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಪೋಷಕರು ಸಮಸ್ತ ನಾಗರಿಕ ಬಂಧು ಭಗನಿಯರು ಉಪಸ್ಥಿತರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್




