
ಮ್ಯಾಂಚೆಸ್ಟರ್: ಇಂಗ್ಲೆಂಡ್ ಕ್ರಿಕೆಟ್ ತಂಡವು ಟ್ವೆಂಟಿ-20 ಮಾದರಿಯ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಬರೆದಿದೆ. ಹೊಡೆಬಡಿ ಆಟದಲ್ಲಿ ಅತ್ಯಧಿಕ ಮೊತ್ತಗಳಿಸಿದ ದಾಖಲೆ ನಿರ್ಮಿಸುವುದರೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ ಗೆಲುವನ್ನೂ ಪಡೆದಿದೆ.
ಇಲ್ಲಿನ ಎಮಿರೆಟ್ಸ್ ಓಲಟ್ರಾಫಿಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ತಂಡವು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಿಗದಿತ 20 ಓವರುಗಳಲ್ಲಿ 2 ವಿಕೆಟ್ ಗೆ 304 ರನ್ ಗಳಿಸಿತು. ದಾಖಲೆಯ ಗೆಲುವಿನ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 16.1 ಓವರುಗಳಲ್ಲಿ 158 ರನ್ ಗಳಿಗೆ ಆಲೌಟಾಗಿ ಸುಲಭವಾಗಿ ಸೋಲೋಪ್ಪಿಕೊಂಡಿತು.
ಇಂಗ್ಲೆಂಡ್ ತಂಡದ ನೂತನ ದಾಖಲೆಗೆ ಕಾರಣರಾದ ಫಿಲ್ ಸಾಲ್ಟ್ 60 ಎಸೆತಗಳಲ್ಲಿ 15 ಬೌಂಡರಿ, 8 ಸಿಕ್ಸರ್ ನೆರವಿನಿಂದ 141 ರನ್ ಗಳಿಸಿದರು. ಜೋಶ್ ಬಟ್ಲರ್ 30 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ನೆರವಿನಿಂದ 83 ರನ್ ಗಳಸಿದರು. ಹಾರ್ರಿ ಬ್ರೋಕ್ 21 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ನೆರವಿನಿಂದ 41 ರನ್ ಗಳಿಸಿದರು.




