ಸೇಡಂ : ತಾಲೂಕಿನ ಹಿಂದುಳಿದ ವರ್ಗಗಳ ಆರ್ಥಿಕ ಸಾಮಾಜಿಕ ಸಮೀಕ್ಷೆ ಇದೆ ತಿಂಗಳು ೨೨/೦೯/೨೦೨೫ ರಿಂದ ಆರಂಭಗೊಳ್ಳಲಿದ್ದು ನಿಮ್ಮ ಮನೆಯ ಬಾಗಿಲಿಗೆ ಅಧಿಕಾರಿಗಳು ಬಂದಾಗ ಹಲವು ಪ್ರಶ್ನೆಗಳಿಗಿರುವ ಅರ್ಜಿ ಇರುತ್ತದೆ.
ಈ ವೇಳೆ ನಮ್ಮ ರೆಡ್ಡಿ ಸಮುದಾಯದವರು ಧರ್ಮದ ಕಲಾಂ ಹಿಂದೂ, ಜಾತಿ ಕಲಾಂ ನಲ್ಲಿ ರೆಡ್ಡಿ ಎಂದು ಬರಿಸುವಂತೆ ಸೇಡಂ ತಾಲೂಕಿನ ರೆಡ್ಡಿ ಸಮಾಜದ ಯುವ ಮುಖಂಡರಾದ ಶ್ರೀನಿವಾಸ್ ರೆಡ್ಡಿ ಮದನಾ ಮನವಿ ಮಾಡಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ರೆಡ್ಡಿ ಸಮಾಜದ ಜಾಗೃತಿ ಸಲುವಾಗಿ ಮತ್ತೆ ಮುಂದಿನ ದಿನಗಳಲ್ಲಿ ಮಕ್ಕಳ ಭವಿಷ್ಯದ ಹಿತಕ್ಕಾಗಿ ಹಿಂದೂ ರೆಡ್ಡಿ ಎಂದೆ ನಮೂದಿಸಿ ಎಂದು ಸಮಾಜದ ಬಂಧುಗಳಲ್ಲಿ ಮನವಿ ಎಂದು ಹೇಳಿದರು.
ರೆಡ್ಡಿ ಸಮಾಜದ ಜಾಗೃತಿ ಮತ್ತು ಒಕ್ಕಟ್ಟು ಮೂಡಿಸಲು ಎಲ್ಲಾ ನಮ್ಮ ರೆಡ್ಡಿ ಸಮಾಜದ ಹಿರಿಯರು ಯುವಕರು ಸಂಘಟಿತರಾಗಬೇಕು ಎಂದು ಹೇಳಿ ಶ್ರೀ ಹೇಮರೆಡ್ಡಿ ಮಲ್ಲಮ್ಮ ತಾಯಿ ಕೃಪೆಗೆ ಪಾತ್ರರಾಗಬೇಕು ಎಂದು ಕರೆ ನೀಡಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




