ಹುಮನಾಬಾದ:ತಾಲ್ಲೂಕಿನ ಡಾಕುಳಗಿ ಗ್ರಾಮದಲ್ಲಿನ ಬುದ್ದ ವಿಹಾರದ ಹಣ ದುರ್ಬಳಕೆ ಮಾಡಿಲ್ಲ ಉದ್ದೇಶ ಪೂರ್ವಕವಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯತ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನನ್ನ ರಾಜಕೀಯ ಬೆಳೆವಣಿಗೆ ಸಹಿಸದೆ ಈ ರೀತಿ ಆರೋಪ ಮಾಡುತ್ತಿದ್ದಾರೆ.
ಕಾರಂಜ ಜಲಾಶಯದಲ್ಲಿ ಬುದ್ಧ ವಿಹಾರ ಮುಳುಗಡೆಯಾಗಿತ್ತು.ಹೀಗಾಗಿ ಕಾರಂಜ ಜಲಾಶಯದವರು ಬುದ್ಧ ವಿಹಾರಕ್ಕೆ ಪರಿಹಾರ ನೀಡಿದ್ದರು.ಇದರಲ್ಲಿ 2023 ನವೆಂಬರ್ 26ರಂದು ಬುದ್ಧ ವಿಹಾರ ಸಮಿತಿಯ ಪದಾಧಿಕಾರಿಗಳ ಅನುಮತಿ ಮೇರಿಗೆ 6 ಲಕ್ಷ 50 ಸಾವಿರ ಹಣ ತೆಗೆದು ಡಾಕುಳಗಿ ಗ್ರಾಮದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಮತ್ತು ಬುದ್ಧ ವಿಹಾರದ ರಿಪೇರಿ ಕಾಮಗಾರಿ ಮಾಡಲಾಗಿದೆ.ನಾವು ಯಾವುದೇ ಒಂದು ಪೈಸೆ ಹಣವನ್ನು ಸಹ ದುರ್ಬಳಕೆ ಮಾಡಿಕೊಂಡಿಲ್ಲ.ಬಿಜೆಪಿ ಕಾರ್ಯಕರ್ತ ವಿದ್ಯಾಸಾಗರ ಅವರು ರಮೇಶ ಡಾಕುಳಗಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಗ್ರಾಮದ ಜನರಿಗೆ ಸುಳ್ಳು ಹೇಳಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರೆ ಏನು ಪ್ರಯೋಜನ.ಯಾವ ಇಲಾಖೆ ಅವರು ಬುದ್ಧ ವಿಹಾರಕ್ಕೆ ಪರಿಹಾರ ನೀಡಿದ್ದಾರೆ ಅವರಿಗೆ ಮನವಿ ನೀಡಿ.ಅವರು ನನ್ನಗೆ ಕೇಳಿದರೆ ನಾನು ಎಲ್ಲಾ ದಾಖಲಾತಿಗಳ ಸಮೇತ ಮಾಹಿತಿ ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪಾಂಡುರಂಗ ಭೈರನಳ್ಳಿ, ಶರಣಪ್ಪ,ಬಾಬುರಾವ್ ಮಾಲೆ,ಶಿವರಾಜ ಲಾಡಕರ್,ವಿಠಲ್ ಲಾಡಕರ್ ಸೇರಿದಂತೆ ಇತರರು ಇದ್ದರು.




