ಸೇಡಂ: ಅಕ್ರಮ ಸೇಂದಿ ಸೇವಿಸಿ ಯುವಜನರು ಸಾವಾಗಿಡಾಗುತ್ತಿದ್ದು ಅವರನ್ನು ತಡೆಯುವಂತಹ ಪ್ರಯತ್ನ ಅಬಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಅಕ್ರಮ ಸೇಂದಿ ತಯಾರಿಕೆಯಲ್ಲಿ ತೊಡಗಿರುವ ಆರೋಪಿಗಳ ಮುಕ್ತ ಉಪವಿಭಾಗವಾಗಿ ಮಾಡಿ ಎಂದು ಸಹಾಯಕ ಉಪ ವಿಭಾಗ ಆಯುಕ್ತರಾದ ಪ್ರಭುರೆಡ್ಡಿ ಹೇಳಿದರು.
ತಾಲೂಕಿನ ಆಡಳಿತ ಸೌಧದ ಉಪವಿಭಾಗ ದಂಡಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದ್ದ ತಾಲೂಕು ಮಟ್ಟದ ಅಬಕಾರಿ ನಿರೀಕ್ಷಕರ ಸೇಡಂ ವಲಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳ್ಳಭಟ್ಟಿ ಸರಾಯಿ ಮತ್ತು ಸೇಂದಿ ಕೇಂದ್ರಗಳನ್ನು ಸಂಪೂರ್ಣ ನಿರ್ಮೂಲನೆ ಮಾಡುವಂತೆ ಖಡಕ್ ಸೂಚನೆ ನೀಡಿದರು.
ಅಬಕಾರಿ ಇಲಾಖೆಯವರು ಅಕ್ರಮ ಸಾರಾಯಿ,ಸೇಂದಿ, ಕಳ್ಳಭಟ್ಟಿ ಇತ್ಯಾದಿ ಮಾರಾಟವನ್ನು ತಡೆಗಟ್ಟಲು ಕಂಕಣತೊಟ್ಟಿದ್ದು ವಿವಿಧ ಇಲಾಖೆಗಳಿಂದ ಅವರಿಗೆ ಬೇಕಾದ ಸಹಕಾರ ನೀಡಲು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಹಾಗೂ ಮುಖ್ಯವಾಗಿ ಪೊಲೀಸ್ ಇಲಾಖೆ ಗ್ರಾಮೀಣ ಅಭಿವೃದ್ಧಿ ಶಾಲಾ ಶಿಕ್ಷಣ, ಆರೋಗ್ಯ, ಇಲಾಖೆ ಮತ್ತು ರೈಲ್ವೆ ಪೊಲೀಸ್ ಇಲಾಖೆಗಳಿಗೆ ಸೂಚನೆ ನೀಡಿರುವ ಜೊತೆಗೆ ಸೇಡಂ ತಾಲೂಕು ಅಂತರ ರಾಜ್ಯ ಗಡಿ ಭಾಗದಲ್ಲಿರುವುದರಿಂದ ಅಂತರ್ ರಾಜ್ಯ ಅಕ್ರಮ ಸಾಗಾಣಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲೂ ಕ್ರಮ ವಹಿಸಲು ಸೂಚಿಸಿವೆ ಎಂದು ಸಹಾಯಕ ಆಯುಕ್ತ ಉಪವಿಭಾಗ ಸೇಡಂ ಪ್ರಭುರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಅಬಕಾರಿ ಇಲಾಖೆ ಉಪ ಆಯುಕ್ತರಾದ ಡಾ. ಸಂಗಣ್ಣಗೌಡ, ಅಬಕಾರಿ ಉಪ ಅಧೀಕ್ಷಕರಾದ ರವೀಂದ್ರ ಪಾಟೀಲ, ಅಬಕಾರಿ ಇಲಾಖೆಯ ಸೇಡಂ ವಲಯ ನಿರೀಕ್ಷಕರಾದ ಓಂಪ್ರಕಾಶ್ ಮಠಪತಿ, ಆರಕ್ಷಕ ಠಾಣೆಯ ಕ್ರೈಮ್ ಪಿಎಸ್ಐ ಶರಣಪ್ಪ ಜಾಕನಹಳ್ಳಿ, ತಾಲೂಕ ಪಂಚಾಯತ್ ಇಓ ಚನ್ನಪ್ಪ ರಾಯಣ್ಣನವರ, ತಾಲೂಕ ಆರೋಗ್ಯ ಅಧಿಕಾರಿ ಡಾ.ಸಂಜೀವ್ ಪಾಟೀಲ್ ಸೇರಿದಂತೆ ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




