ನವದೆಹಲಿ: ಕುಟುಂಬ ರಾಜಕಾರಣ ಭಾರತದಲ್ಲಿರುವ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಇದರಿಂದ ಹೊರತಾಗಿಲ್ಲ. ಬೂದುಗಾಜು ಹಾಕಿ ಹುಡುಕಿದ್ರೆ ಕುಟುಂಬ ರಾಜಕಾರಣದಿಂದ ಹೊರನಿಂತ ಪಕ್ಷಗಳು ಅಲ್ಲೊಂದು ಇಲ್ಲೊಂದು ಉದಾಹರಣೆಗಳು ಸಿಗಬುದೇನೋ..ಹೀಗೆ ಭಾರತದಲ್ಲಿ ಕುಟುಂಬ ರಾಜಕಾರಣ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನ ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR) ಈ ಬಗ್ಗೆ ವರದಿ ಪ್ರಕಟಿಸಿದ್ದು, ಇದರ ಪ್ರಕಾರ ಭಾರತದಲ್ಲಿ 21% ಸಂಸದರು, ಶಾಸಕರು ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿದವರು ಎನ್ನಲಾಗಿದೆ. ದೇಶಾದ್ಯಂತ ಸಂಸದರು, ಶಾಸಕರು, ಎಂಎಲ್ಸಿಗಳ ಪೈಕಿ ಪ್ರತಿ ಐದರಲ್ಲಿ ಒಬ್ಬರು ಕುಟುಂಬ ರಾಜಕಾರಣದಿಂದ ಬಂದವರಿದ್ದಾರೆ ಎಂದು ವರದಿ ಹೇಳಿದೆ.
ಇನ್ನು ನಮ್ಮ ರಾಜ್ಯ ಕೂಡ ಈ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ.ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕುಟುಂಬ ರಾಜಕಾರಣ ಬಲವಾಗಿ ಬೇರೂರಿದೆ ಎಂದು ಈ ವರದಿ ಹೇಳುತ್ತದೆ.
ಕರ್ನಾಟಕ ಈ ಲಿಸ್ಟ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.ಕರ್ನಾಟಕದಲ್ಲಿ ಒಟ್ಟು 94 ಜನಪ್ರದಿನಿಧಿಗಳು ಕುಟುಂಬ ರಾಜಕಾರಣದ ಫಲವಾಗಿ ಅಧಿಕಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇತರೆ ರಾಜ್ಯಗಳಲ್ಲಿ ಗಮನಿಸಿದಾಗ ಮಹಾರಾಷ್ಟ್ರದಲ್ಲಿ 129, ಉತ್ತರ ಪ್ರದೇಶದಲ್ಲಿ 141, ಬಿಹಾರದಲ್ಲಿ 96 ಜನ ಕುಟುಂಬ ರಾಜಕಾರಣ ಹಿನ್ನಲೆ ಹೊಂದಿದವರು ಇದ್ದಾರೆ. ಆದ್ರೆ ಅಸ್ಸಾಂ ಕೊನೆಯ ಸ್ಥಾನದಲ್ಲಿದ್ದು, ಇಲ್ಲಿ ಕೇವಲ 9 ಮಂದಿ ಎಂದು ವರದಿಯಾಗಿದೆ.




