
ದುಬೈ: ಏಶಿಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯ ತನ್ನ ಎ, ಗುಂಪಿನ ಎರಡನೇ ಪಂದ್ಯದಲ್ಲಿ ಇಂದು ಭಾರತ ತಂಡವು ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ತನ್ನ ಮೊದಲ ಲೀಗ್ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿರುವ ಭಾರತ ತಂಡವು ಪಾಕಿಸ್ತಾನ ತಂಡಕ್ಕಿಂತ ಹತ್ತು ಪಟ್ಟು ಬಲಿಷ್ಠವಾಗಿದ್ದು, ಎರಡನೇ ಪಂದ್ಯವನ್ನೂ ಸುಲಭವಾಗಿ ಗೆಲ್ಲುವ ವಿಶ್ವಾಸದಲ್ಲಿದೆ.
ಪಾಕಿಸ್ತಾನ ತಂಡ ಹೊಸ ತಂಡವಾಗಿದ್ದು, ದುರ್ಬಲ ತಂಡ ಎನ್ನುವುದು ಈ ಹಿಂದಿನ ಹಲವು ಸರಣಿಗಳಲ್ಲಿ ಸಾಭೀತಾಗಿದೆ. ಇನ್ನೊಂದೆಡೆ ಭಾರತ ಬಲಿಷ್ಠ ತಂಡವಾಗಿದೆ. ಪಂದ್ಯ ಸಾಯಂಕಾಲ 8 ಕ್ಕೆ ಆರಂಭವಾಗಲಿದೆ.




