ಗಂಗಾವತಿ ಡಾ. ಚನ್ನಬಸವ ಅವರಿಗೆ ಜನ್ಮ ದಿನದಂದೆ ಹರಿಯಾಣ
ವಿಶ್ವವಿದ್ಯಾಲಯದ ಬಹುದೊಡ್ಡ ಕಾಣಿಕೆ

ದೆಹಲಿ ಫರೀದಾಬಾದ್ ನ ಕ್ಯಾಸ್ಟಲ್ ಆಫ್ ಆರ್ಟ್ ಥಿಯೇಟರ್ ಸಭಾಂಗಣದಲ್ಲಿ ದಿನಾಂಕ 13 9:25 ರಂದು ದಕ್ಷಿಣ ಭಾರತ- ಕರ್ನಾಟಕದ – ವಾಣಿಜ್ಯ ನಗರಿ ಗಂಗಾವತಿಯ ಡಾಕ್ಟರ್ ಚನ್ನಬಸವ ಕೊಟಗಿ ಅವರಿಗೆ ಅವರ ಜನ್ಮದಿನದಂದು ಅವರ 15 ವರ್ಷಗಳ ಕಲಾ ಸೇವೆ, ಪತ್ರಿಕಾ ರಂಗ, ಚಿತ್ರರಂಗ,ದೂರದರ್ಶನ ಸೇವೆ, ಹಾಗೂ ಐತಿಹಾಸಿಕ ಮಾರ್ಗದರ್ಶನ ಹಲವಾರು ಕ್ಷೇತ್ರಗಳನ್ನು ಒಳಗೊಂಡ ಸೇವೆಗಳನ್ನು ಮನ್ನಿಸಿ
ಹರಿಯಾಣ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದ್ದು, ದಿನಾಂಕ 13 ರಂದು ಕ್ಯಾಸ್ಪಲ್ ಆರ್ಟ ಥಿಯೇಟರ್ ನಲ್ಲಿ ಗೌರವಿಸಿ, ಸನ್ಮಾನಿಸಿ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಈ ಅತ್ಯುನ್ನತ ವರ್ಣರಂಜಿತ ಸಮಾರಂಭದಲ್ಲಿ ಹರಿಯಾಣ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಮಹಾ ಪ್ರಬಂಧಕರಾದ ಡಾ. ರಾಜ್ ಪಾಲ್, ಹರಿಯಾಣ ಸರ್ಕಾರದ ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಕಮಲೇಶ್ ಶಾಸ್ತ್ರಿ ಮತ್ತು ಮಾಜಿ ರಾಷ್ಟ್ರಪತಿ ದಿವಂಗತ ಶಂಕರ್ ದಯಾಳ್ ಶರ್ಮ ಇವರ ಮೊಮ್ಮಗಳಾದ ಡಾ.ಬಿಂದು ಭಾರ್ಗವ್, ಹಾಗೂ ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್ ಛೇರ್ಮನ್ ಡಾ. ಸಿ ಪಿ ಯಾದವ್, ರಾಜೇಶ್ ಅಗರ್ವಾಲ್, ಡಾ.ಸುದರ್ಶನ ಸಿಂಗ್ , ಡಾ .ಗೀತಾಂಜಲಿ ಶರ್ಮ ಸುಪ್ರೀಂ ಕೋರ್ಟಿನ ವಕೀಲರು ಇನ್ನಿತರ ಗಣ್ಯರ ಸಮ್ಮುಖದಲ್ಲಿ ಗಂಗಾವತಿಯ ಉದಯೋನ್ಮುಖ ಕಲಾವಿದ, ವರದಿಗಾರ, ಮಾರ್ಗದರ್ಶಕರಾದ ಚನ್ನಬಸವ ಕೊಟಗಿ ಇವರ ಜನ್ಮದಿನದಂದು ಜೀವಮಾನದಲ್ಲಿಯೇ ಮರೆಯಲಾರದಂತ ಬಹುದೊಡ್ಡ ಕಾಣಿಕೆ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದು ತುಂಬಾ ಸಂತೋಷವಾಯಿತು ಎಂದು ಡಾ.ಚನ್ನಬಸವ ಕೊಟಗಿ ಯವರು ಸಂತಸ ಹಂಚಿಕೊಂಡಿದ್ದಾರೆ.
ಈ ಗೌರವ ಡಾಕ್ಟರೇಟ್ ಪದವಿ ಪಡೆದ ಚನ್ನಬಸವ ಕೊಟಿಗಿ ಯವರಿಗೆ ಗಂಗಾವತಿ ನಗರದ , ಜಿಲ್ಲೆ, ರಾಜ್ಯದ ಅನೇಕ ಸಂಘ ಸಂಸ್ಥೆಗಳು, ಕಲಾವಿದರು, ಸಾಹಿತ್ಯ ಅಭಿಮಾನಿಗಳು, ಸ್ನೇಹಿತರು, ದೂರ ದರ್ಶನ ಸಿಬ್ಬಂದಿಗಳು ಹಾಗು ಕುಟುಂಬದ ವರ್ಗದವರು ಹರ್ಷವ್ಯಕ್ತ ಪಡಿಸಿದ್ದಾರೆ.




