Ad imageAd image

ಹಿರೇಕೊಡಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಕರವೇ ಆಗ್ರಹ

Bharath Vaibhav
ಹಿರೇಕೊಡಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಕರವೇ ಆಗ್ರಹ
WhatsApp Group Join Now
Telegram Group Join Now

ಚಿಕ್ಕೋಡಿ : ಹಿರೇಕೂಡಿ ಗ್ರಾಮದ ಮುರಾರ್ಜಿ ಶಾಲೆಯಲ್ಲಿ ದೋಷಿತ ಆಹಾರ ಸೇವಿಸಿ ಮಕ್ಕಳು ಅಸ್ತವ್ಯಸ್ತರಾಗಿದ ಘಟನೆ ಕಂಡಿಸಿ‌. ಘಟನೆಗೆ ಸಂಬಂಧಪಟ್ಟ ಶಾಲಾ ಅಡುಗೆ ಸಿಬ್ಬಂದಿ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಕ್ಷಾಣಾ ವೇದಿಕೆ ಹಿರೇಕೊಡಿ ಗ್ರಾಮ ಘಟಕದ ಕಾರ್ಯಕರ್ತರು ಶಾಲಾ ಪ್ರಾಂಶುಪಾಲರಿಗೆ ಮನವಿ ಕೊಟ್ಟು ಸಂಬದಿಸಿದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಲಾಯಿತು.

ಮುರಾರ್ಜಿ ಶಾಲೆಯ ಮಕ್ಕಳ ಜೀವದ ಜೋತೆ ಆಟ ಆಡುತ್ತಿರುವ ಜವಾಬ್ದಾರಿ ರಹಿತ ಸಿಬ್ಬಂದಿ ವರ್ಗವನ್ನು ತಕ್ಷಣವೇ ಅಮಾನತಿನಲ್ಲಿಟ್ಟು ಸಂಬಂಧಿಸಿದ ಘಟನೆ ಕುರಿತು ಸಮಗ್ರ ಚೌಕಸಿ ನಡೆಸಿಬೇಕು. ಹಾಗೂ
ಶಾಲಾ ಆವರಣದಲ್ಲಿ ಹಾಗೂ ಶಾಲಾ ಹಾಸ್ಟೆಲ್ ಎಲ್ಲೆಡೆಯೂ ಸ್ವಚ್ಚತೆ ಹಾಗೂ ನೈರ್ಮಲ್ಯತೆ ಬಗ್ಗೆ ಕಾಳಜಿವಹಿಸಿ ಮಕ್ಕಳ ಶಿಕ್ಷಣದ ಜೋತೆ ಅವರ ಆರೋಗ್ಯವು ಅತಿ ಮುಖ್ಯವಾದದ್ದು ಅಂತಾ ಮನವರಿಕೆ ಮಾಡಿ ಮುಂದೆ ಈ ತರಹದ ಘಟನೆಗಳು ಮರುಕಳಿಸದಂತೆ ನಿಗಾವಹಿಸಲು ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಕರವೇ ಗ್ರಾಮ ಘಟಕದ ಅದ್ಯಕ್ಷರಾದ ಸಂಜೀವ್ ಕಾಂಬಳೆ . ಸಾಗರ ನಿಂಗಾಗೊಳ (ಉಪಾಧ್ಯಕ್ಷರು)ರಾಜು ಕಾಂಬಳೆ . ಅಜಿತ ಲೋಕರೆ,ರಜನೀಕಾಂತ್ ಬಡಿಗೇರ. ಮೋಷಿನ್ ಪಟೇಲ್. ರಾಜು ಪೆಂಡಾರಿ, ಪಾಶ್ವನಾತಥ ಬಾಳಿಕಾಯಿ. ಜೋತೆ ಹಲವಾರು ಕರವೇ ಸೇವಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!