ಭಾಲ್ಕಿ : ಕುಂಬಾರ್ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಜಾತಿಗಣತಿ ಹಾಗೂ ಕಲ್ಯಾಣ ಪರ್ವ ನಿಮಿತ್ತವಾಗಿ ಮಹತ್ವದ ಸಭೆ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.
ಸಭೆಯನ್ನು ಜಾಗತಿಕ ಲಿಂಗಾಯತ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ್ ಬಳ್ಳ ಅವರ ನೇತೃತ್ವದಲ್ಲಿ, ರಾಷ್ಟ್ರೀಯ ಬಸವದಳ ಹಾಗೂ ವಿವಿಧ ಬಸವಪರ ಸಂಘಟನೆಗಳ ನಾಯಕರು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ್ ಬಳ್ಳ ಹಾಗೂ ಕಿರಣ್ ಖಂಡ್ರೆ ಅವರು,
ಬರುವ 22ನೇ ತಾರೀಖಿನಿಂದ ಜಾತಿಗಣತಿ ಪ್ರಾರಂಭವಾಗಲಿದ್ದು, ಎಲ್ಲರೂ “ಲಿಂಗಾಯತ” ಎಂದು ನಮೂದಿಸಬೇಕು ಎಂದು ಕರೆ ನೀಡಿದರು.
ಉಪಜಾತಿ ಬಣಜಿಗ, ಕುಂಬಾರ, ನೇಕಾರ, ಹೂಗಾರ, ಗಾಣಿಗ ಮುಂತಾದವುಗಳನ್ನು ಸ್ಪಷ್ಟವಾಗಿ ಲಿಂಗಾಯತ ಉಪಜಾತಿ ಎಂದು ಬರೆಯುವಂತೆ ಒತ್ತಾಯಿಸಿದರು.
“ಅಪ್ಪ ಬಸವಣ್ಣ ಕೊಟ್ಟಂತ ನಮ್ಮ ಧರ್ಮ ಲಿಂಗಾಯತ ಧರ್ಮ. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು” ಎಂದು ಮನವಿ ಮಾಡಿದರು.

ಇದೇ ವೇಳೆ, ಸೆಪ್ಟೆಂಬರ್ 5ರಂದು ಅರಮನೆ ಮೈದಾನದಲ್ಲಿ ಲಿಂಗಾಯತ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಲಕ್ಷಾಂತರ ಜನರ ಹಾಜರಾತಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಲಿಂಗಾಯತ ಮುಖಂಡರಾದ ಬಸವರಾಜ ಬುಳ್ಳ,ಕಿಶನರಾವ ಪಾಟೀಲ ಇಂಚುರಕರ,ಕಿರಣ್ ಖಂಡ್ರೆ,ಶ್ರೀಕಾಂತ್ ಭುರಾಳೆ,ಗುಂಡಪ್ಪ ಸಂಗಮ್ಮರ,ಮಲ್ಲಿಕಾರ್ಜುನ ಗೋಣಗಾಪುರೆ,ಶಿವಲಿಂಗಯ್ಯ ಸ್ವಾಮಿ ಹಾಗೂ ಅನೇಕರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ವರದಿ:ಸಂತೋಷ ಬಿಜಿ ಪಾಟೀಲ




