ಸೇಡಂ: ತಾಲೂಕಿನ ಮಲ್ಕಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡವನ್ನು ಅನೇಕ ಸಮಸ್ಯೆಗಳು ಎದುರಿಸುತ್ತಾ ಕೊನೆಗೂ ಹಳೆಯ ಬಿಲ್ಡಿಂಗ್ ಕುಸಿದು ಬಿದ್ದು ಮಕ್ಕಳಿಗೆ ಅಪಘಾತ ಆದ ನಂತರ ಹೊಸ ಕಟ್ಟಡವನ್ನು ಉದ್ಘಾಟನೆ ಮಾಡಲಾಯಿತು. ಆದರೆ ಉದ್ಘಾಟನೆ ಮಾಡಿ ಒಂದು ತಿಂಗಳು ಆದರೂ ಇದುವರೆಗೂ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಇಲ್ಲಾ ಇದರಿಂದ ಶೌಚಾಲಯದಲ್ಲಿ ನೀರು ಇಲ್ಲದ ಕಾರಣ ಶಾಲಾ ಮಕ್ಕಳಿಗೆ ತುಂಬ ತೊಂದರೆಯಾಗಿದೆ ಹಾಗೇ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಅಡುಗೆ ಮಾಡಿ ಮಕ್ಕಳಿಗೆ ಊಟ ನೀಡುವುದು ತುಂಬ ತೊಂದರೆ ಆಗುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತೊಂದು ಅಪಘಾತ ಆಗುವಕ್ಕಿಂತ ಮುಂಚೆ ಎಚ್ಚೆತ್ತುಕೊಂಡು ಪರಿಹಾರ ಒದಗಿಸಿಕೊಡಬೇಕೆಂದು ಎಂದು ಗ್ರಾಮ ಪಂಚಾಯತ್ ಸದಸ್ಯರಾದ ನವದ ರೆಡ್ಡಿ ಮಲ್ಕಪಲ್ಲಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




