ಲಿಂಗಸ್ಗೂರು: ಹಟ್ಟಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸುರೇಂದ್ರಬಾಬು ಭೇಟಿ ನೀಡುವ ಮೂಲಕ ಸಿಬ್ಬಂದಿ ಹಾಗು ವೈದ್ಯರ ಜೊತೆ ಚರ್ಚೆ ನಡೆಸಿ ಮಾಹಿತಿ ಪಡೆದರು.
ಶುದ್ಧ ನೀರಿನ ಘಟಕ, ಪ್ರಸೂತಿ ಕೋಣೆ , ತುರ್ತು ಚಿಕಿತ್ಸಾ ವಿಭಾಗ, ಒಳ ರೋಗಿಗಳ ಕೋಣೆ, ಶೌಚಾಲಯ, ಆರೋಗ್ಯ ಕೇಂದ್ರಕ್ಕೆ ಪದೇ ಪದೇ ವಿದ್ಯುತ್ ವ್ಯಥೆಯೇ ಆಗುವ ಕಾರಣ, ಸೋಲಾರ್ ಪೆನಾಲ್, ಜನರೇಟರ್, ಇನ್ವೆಂಟರ್ ಬ್ಯಾಟರಿ ಪರಿಶೀಲಿಸಿದರು, ನಂತರ ಟಿ ಹೆಚ್ ಓ ಅಮರೇಗೌಡ ಪಾಟೀಲ್ , ಹಟ್ಟಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಕಿರಣ್ ಕುಮಾರ್ , ಹಾಗೂ ಮಹಿಳೆ ವೈದ್ಯರಾದ ಟೀನಾ, ಸ್ಟಾಪ್ ನರ್ಸ್ ಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವಂತಹ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದ ಹಾಗೆ ನೋಡಿಕೊಳ್ಳಬೇಕು, ಸರಿಯಾಗಿ ಅವರಿಗೆ ಚಿಕಿತ್ಸೆ ನೀಡಬೇಕು ಹೆರಿಗೆಗೆ ಬಂದ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ತಾಯಿ ಮಗುವನ್ನು ರಕ್ಷಿಸಬೇಕು, ಸುಲಭ ಹೆರಿಗೆ ಆಗದಿದ್ದರೆ ಸೂಕ್ತ ಸಮಯದಲ್ಲಿ ತಾಲೂಕ್ ಆಸ್ಪತ್ರೆಗೆ ರೆಫರ್ ಮಾಡಬೇಕಾದರೆ ಆಂಬುಲೆನ್ಸ್ ಮೂಲಕ ಅವರನ್ನು ಕಳಿಸಿ ಕೊಡಬೇಕೆಂದು ಅವರಿಗೆ ತಿಳಿಸಿದರು.
ಆಸ್ಪತ್ರೆಯಲ್ಲಿ ಯಾವುದೇ ಔಷಧಿ ಕಡಿಮೆ ಇದ್ದರೆ ಕೂಡಲೇ ಅವುಗಳನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ ಆಸ್ಪತ್ರೆಗೆ ಬರುವ ರೋಗಿಗಳನ್ನು ತಪಾಸಣೆ ಮಾಡುವ ಮೂಲಕ ಅದರ ಜೊತೆಗೆ ಆಸ್ಪತ್ರೆಯ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಹೆರಿಗೆಯಾದವರಿಗೆ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆ ಮಾಡಬೇಕು ಮತ್ತು ಶುದ್ಧ ಕುಡಿಯುವ ನೀರು ಅವರಿಗೆ ನೀಡಬೇಕೆಂದು ಹೇಳುವ ಮೂಲಕ ಇದರಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ವೈದ್ಯರದಾಗಿರುತ್ತದೆ, ತಾಯಿ ಮತ್ತು ಮಗುವಿಗೆ ಸರಿಯಾದ ಸಮಯಕ್ಕೆ ಸಂಬಂಧಪಟ್ಟ ವ್ಯಾಕ್ಸೀನ್ ಸಮಯಕ್ಕೆ ಸರಿಯಾಗಿ ನೀಡಬೇಕೆಂದು ಸೂಚಿಸಿದರು.
ಮುಂದಿನ ದಿನಗಳಲ್ಲಿ ಹಟ್ಟಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು, ಮತ್ತು ಈಗಾಗಲೇ ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ, ಈಗಾಗಲೇ ಕಟ್ಟಡ ಕಾಮಗಾರಿ ಪ್ರಾರಂಭವಾಗಬೇಕಾಗಿತ್ತು ಜಾಗದ ವಿಷಯವಾಗಿ ನ್ಯಾಯಾಲಯದಲ್ಲಿ ಪ್ರಕಣ ಇರುವ ಕಾರಣದಿಂದ ವಿಳಂಬವಾಗಿದೆ ಇತ್ಯಾದಿವಾದ ತಕ್ಷಣ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳುವುದು, ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಅಂಬುಲೆನ್ಸ್ ವ್ಯವಸ್ಥೆ ಇರುತ್ತದೆ ಅದನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ತಿಳಿಸಿದರು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ವೈದ್ಯರಾದ ಗಣೇಶ್,ಟಿ ಹೆಚ್ ಓ ಅಮರೇಗೌಡ ಪಾಟೀಲ್, ಅರ್ಜುನ್,ವೈದ್ಯರಾದ ಕಿರಣ್ ಕುಮಾರ್, ಟೀನಾ,ಸ್ಟಾಪ್ ನರ್ಸ್ ಸರಿತಾ, ಉಪಸ್ಥಿತರಿದ್ದರು.




