ಸಿಂಧನೂರು : ಪರಿಶಿಷ್ಟ ಜಾತಿ ಒಳ ಮೀಸಲಾತಿಯಿಂದ ಬಾದಿತರಾದ ಮಾಲದಾಸರ್. ಚೆನ್ನ ದಾಸರ್. ಮತ್ತು ಹೊಲಿಯದಾಸರ್. “ಬಿ” ಕೆಟಗರಿ (ಬಲಗೈ) ಗುಂಪಿಗೆ ಸೇರಿಸಬೇಕು ನಾವು ಎಂದಿಗೂ ಅಲೆಮಾರಿಗಳಲ್ಲ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದವರಾಗಿದ್ದೇವೆ ನಾವುಗಳೆಲ್ಲರೂ ಮಾದಿಗ ಮತ್ತು ಛಲವಾದಿ ಕುಟುಂಬಗಳ ಜೊತೆಯಲ್ಲಿ ಊರಿನ ಕೇರಿಗಳಲ್ಲಿ ಅಣ್ಣ- ತಮ್ಮಂದಿರಂತೆ ಬದುಕುತಿದ್ದೆವೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಪ್ರಕಾರ ಮತ್ತು ನಾವು ವಾಸ್ತವದಲ್ಲಿ ಛಲವಾದಿ ಸಂಬಂಧಿತ ಜಾತಿಯವರಾಗಿದ್ದೇವೆ ಹಾಗಾಗಿ ನಾವು ಪರಿಶಿಷ್ಟ ಜಾತಿ ಪ್ರವರ್ಗ “ಬಿ” (ಬಲಗೈ) ಗುಂಪಿಗೆ ಸೇರುವುದು ನಮ್ಮ ಹಕ್ಕು ಮತ್ತು ಅಧಿಕಾರವಾಗಿದೆ ನಾವು ತೀರ ಹಿಂದುಳಿದಿದ್ದೇವೆ
ನಮ್ಮ ಸಮಾಜದಿಂದ ಇಂದಿಗೂ ಒಬ್ಬನೇ ಒಬ್ಬ ಕೆಎಎಸ್. ಐಎಎಸ್. ಅಧಿಕಾರಿಗಳಾಗಿಲ್ಲ ಆರ್ಥಿಕವಾಗಿ ನಮ್ಮ ಜನಾಂಗ ಅತ್ಯಂತ ಹಿಂದುಳಿದಿದೆ ಸರ್ಕಾರ ಪರಿಶಿಷ್ಟ ಜಾತಿ ಪ್ರವರ್ಗ ಸಿ” ಕೆಟಗರಿ (ಸ್ಪರ್ಶ) ಗುಂಪಿಗೆ ಸೇರಿಸಿ ನಮ್ಮ ಸಮಾಜಕ್ಕೆ ಮಹಾ ದ್ರೋಹ ಮಾಡಿದೆ ರಾಜಕೀಯವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಅತ್ಯಂತ ಪ್ರಬಲ ಜಾತಿಗಳಾದ ಲಂಬಾಣಿ. ಭೋವಿ. ಬೇಡ ಜಂಗಮರೊಂದಿಗೆ. ನಮ್ಮ ಸಮಾಜವನ್ನು ಸೇರಿಸಿ ಹುಲಿಗಳೊಂದಿಗೆ ಇಲಿಗಳನ್ನು ಸ್ಪರ್ಧೆಗೆ ಬಿಟ್ಟಂತಾಗಿದೆ ನಮ್ಮ ಹಕ್ಕು ಮತ್ತು ಅವಕಾಶಗಳನ್ನು ಪಡೆದುಕೊಳ್ಳಲು ಪರಿಶಿಷ್ಟ ಜಾತಿ ಪ್ರವರ್ಗ ಬಿ” (ಬಲಗೈ) ಗುಂಪಿಗೆ ಸೇರಿಸಬೇಕೆಂದು ತಹಸಿಲ್ದಾರ್ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮಾನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗದ್ದಪ್ಪ ಈಚನಾಳ, ದೇವೇಂದ್ರಪ್ಪ ಗೊರೆಬಾಳ, ನರಸಿಂಹ ಬೇರ್ಗಿ, ಬಾಲಯ್ಯ ಗೊರೆಬಾಳ್ ಕ್ಯಾಂಪ್. ಬಿ. ಹೊನ್ನಪ್ಪ ಪಕೀಲರು, ಯಂಕೋಬಾ ರಾಮತ್ನಾಳ, ನಾಗರಾಜ ಕೆ. ಹೊಸಳ್ಳಿ, ಸತ್ಯನಾರಾಯಣ ತುರುವಿಹಾಳ ಇದ್ದು 25ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ವರದಿ: ಬಸವರಾಜ ಬುಕ್ಕನಹಟ್ಟಿ




