Ad imageAd image

ಏಶಿಯಾ ಕಪ್ ಕ್ರಿಕೆಟ್: ಶ್ರೀಲಂಕಾಕ್ಕೆ 4 ವಿಕೆಟ್ ಗಳ ಜಯ

Bharath Vaibhav
ಏಶಿಯಾ ಕಪ್ ಕ್ರಿಕೆಟ್: ಶ್ರೀಲಂಕಾಕ್ಕೆ 4 ವಿಕೆಟ್ ಗಳ ಜಯ
WhatsApp Group Join Now
Telegram Group Join Now

ದುಬೈ: ಪಾತುಮ್ ನಿಶಾಂಕಾ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ ಏಶಿಯಾ ಕಪ್ ಬಿ, ಗುಂಪಿನ ಪಂದ್ಯದಲ್ಲಿ ಹಾಂಗಕಾಂಗ್ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿತು.

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹಾಂಗಕಾಂಗ್ ನಿಗದಿತ 20 ಓವರುಗಳಲ್ಲಿ 4 ವಿಕೆಟ್ ಗೆ 149 ರನ್ ಗಳಿಸಿತು. ಪ್ರತಿಯಾಗಿ ಆಡಿದ ಶ್ರೀಲಂಕಾ ತಂಡವು 18.5 ಓವರುಗಳಲ್ಲಿ 6 ವಿಕೆಟ್ ಗೆ 153 ರನ್ ಗಳಿಸಿ ಜಯಗಳಿಸಿತು.

ಈ ಗೆಲುವಿನೊಂದಿಗೆ ಶ್ರೀಲಂಕಾ ಕ್ರಿಕೆಟ್ ತಂಡವು 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆರಿದೆ. ಅಪಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಲಾ ಎರಡು ಪಾಯಿಂಟ್ ಪಡೆದು ದ್ವಿತೀಯ ಸ್ಥಾನದಲ್ಲಿವೆ.

ಸ್ಕೋರ್ ವಿವರ

ಹಾಂಗಕಾಂಗ್ 20 ಓವರುಗಳಲ್ಲಿ 4 ವಿಕೆಟ್ ಗೆ 149

ಅನ್ಸುಮನ್ ರಾಥ 48 ( 46  ಎಸೆತ, 4 ಬೌಂಡರಿ, ನಿಜಾಖತ್ ಖಾನ್ 52 ( 38 ಎಸೆತ, 4 ಬೌಂಡರಿ, 2 ಸಿಕ್ಸರ್)

ಚಮೀರಾ 29 ಕ್ಕೆ 2) 

ಶ್ರೀಲಂಕಾ 18.5 ಓವರುಗಳಲ್ಲಿ 6 ವಿಕೆಟ್ ಗೆ 153 ( ಪಾತುಮಾ ನಿಶಾಂಕಾ 68 ( 44 ಎಸೆತ, 6 ಬೌಂಡರಿ, 2 ಸಿಕ್ಸರ್)  ಯಾಸೀಮ್ ಮುರ್ತಜಾ 37 ಕ್ಕೆ 2)

ಪಂದ್ಯ ಶ್ರೇಷ್ಠ: ಪಾತುಮ್ ನಿಶಾಂಕಾ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!