Ad imageAd image

ಧರ್ಮಸ್ಥಳದ ಬಂಗ್ಲಗುಡ್ಡ ಪ್ರದೇಶದಲ್ಲಿ ಐದು ಕಡೆ ರಾಶಿ ರಾಶಿ ಮೂಳೆಗಳು ಪತ್ತೆ

Bharath Vaibhav
ಧರ್ಮಸ್ಥಳದ ಬಂಗ್ಲಗುಡ್ಡ ಪ್ರದೇಶದಲ್ಲಿ ಐದು ಕಡೆ ರಾಶಿ ರಾಶಿ ಮೂಳೆಗಳು ಪತ್ತೆ
WhatsApp Group Join Now
Telegram Group Join Now

ಮಂಗಳೂರು: ಧರ್ಮಸ್ಥಳ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಧರ್ಮಸ್ಥಳದ ಬಂಗ್ಲಗುಡ್ಡ ಪ್ರದೇಶ ದಟ್ಟ ಅರಣ್ಯದಲ್ಲಿ ಐದು ಕಡೆ ರಾಶಿ ರಾಶಿ ಮೂಳೆಗಳು ಪತ್ತೆಯಾಗಿವೆ.

ಸೌಜನ್ಯಾ ಮಾವ ವಿಠಲಗೌಡ ಹೇಳಿದ್ದ ಬಂಗ್ಲಗುಡ್ಡ ಪ್ರದೇಶದಲ್ಲಿ ಎಸ್ ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಬಂಗ್ಕಗುಡ್ಡದ ಐದು ಸ್ಥಳಗಳಲ್ಲಿ ಮೂಳೆಗಳು ಪತ್ತೆಯಾಗಿವೆ.ಭೂಮಿಯ ಮೇಲ್ಭಾಗದಲ್ಲಿಯೇ ಮಾನವನ ಮೂಳೆಗಳು ಪತ್ತೆಯಾಗಿವೆ.

ಎಸ್ ಐಟಿ ಅಧಿಕಾರಿಗಳು ಮೂರು ತಂಡಗಳಾಗಿ ವಿಂಗಡಣೆಗೊಂಡು ಬಂಗ್ಲಗುಡ್ಡದ ದಟ್ಟ ಅರಣ್ಯದಲ್ಲಿ ಶೋಧಕಾರ್ಯ ಮುಂದುವರೆಸಿದೆ.

ಐದು ಸ್ಥಳಗಳಲ್ಲಿ ಮೂಳೆಗಳು ಪತ್ತೆಯಾಗಿದ್ದು, ಮೂಳೆಗಳನ್ನು ಸೋಕೋ ಟೀಂ ಪೈಪ್ ಮೂಲಕ ಸಂಗ್ರಹಿಸಿ ಎಫ್ ಎಸ್ ಎಲ್ ಗೆ ಕಳುಹಿಸಲು ಸಿದ್ಧತೆ ನಡೆಸಿದೆ.

ಬಂಗ್ಲಗುಡ್ಡದಲ್ಲಿ ರಾಶಿ ರಾಶಿ ಮೂಳೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಪ್ರಕರಣಕ್ಕೆ ಇದು ಹೊಸ ತಿರುವು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!