Ad imageAd image

ಶ್ರೀ ವಿರಾಟ್ ವಿಶ್ವಕರ್ಮ ಜಯಂತೋತ್ಸವ

Bharath Vaibhav
ಶ್ರೀ ವಿರಾಟ್ ವಿಶ್ವಕರ್ಮ ಜಯಂತೋತ್ಸವ
WhatsApp Group Join Now
Telegram Group Join Now

———————————-ವಿಶ್ವಕರ್ಮ ರನ್ನು ದೇವರುಗಳ ವಾಸ್ತುಶಿಲ್ಪ ಮತ್ತು ಬ್ರಹ್ಮಾಂಡದ

————-ಮೊದಲ ಇಂಜಿನಿಯರ್ ಎಂದು ಪೂಜಿಸಲಾಗುತ್ತಿತ್ತು: ಶಿಕ್ಷಕ ರಾಘವೇಂದ್ರ ಆಚಾರ್

ಮೊಳಕಾಲ್ಮುರು: ವಿಶ್ವಕರ್ಮರನ್ನು ದೇವರುಗಳ ವಾಸ್ತುಶಿಲ್ಪಿ ಎಂದು ಹಿಂದೆ ಪರಿಗಣಿಸಲಾಗಿ, ಬ್ರಹ್ಮಾಂಡದ ಮೊದಲ ಇಂಜಿನಿಯರ್ ಎಂದು ಪೂಜಿಸಲಾಗುತ್ತಿತ್ತು ಎಂದು ಶಿಕ್ಷಕ ರಾಘವೇಂದ್ರ ಆಚಾ‌ರ್ ತಿಳಿಸಿದರು.

ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಬುಧವಾರ ತಾಲೂಕು ವಿಶ್ವ ಕರ್ಮ ಸಮಾಜದಿಂದ ಏರ್ಪಡಿಸಿದ್ದ ಶ್ರೀ ವಿರಾಟ್ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವಕರ್ಮ ಸಮುದಾಯದವರು ಸಂಘಟಿತರಾಗಬೇಕು. ಮಕ್ಕಳಿಗೆ ಖಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಸಮುದಾಯದಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸಮೂಹಿಕವಾಗಿ ಪ್ರೋತ್ಸಾಹಿಸುವುದರಿಂದ ಅನೇಕ ಮಕ್ಕಳ ಉತ್ಸಾಹ ಇಮ್ಮಡಿಯಾಗಿ ಇವರೂ ವಿದ್ಯಾಬ್ಯಾದ ಕಡೆ ಹೆಚ್ಚು ಗಮನ ನೀಡುವಂತಾಗಲಿದೆ ಎಂದರು.
ಪ್ರಸ್ತಾವಿಕವಾಗಿ ಸುರೇಶ್ ಆಚಾರ್ಯರವರು ಬಹಳ ಸ್ವಚ್ಛವಾಗಿ ವಿಶ್ವಕರ್ಮರ ಹಿನ್ನೆಲೆಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಇ ಓ ಹನುಮಂತಪ್ಪ, ಮಾತನಾಡಿದರು ಕಾರ್ಯಕ್ರಮದ ಕೇಂದ್ರಬಿಂದು ಮತ್ತು ವಿಶ್ವಕರ್ಮ ಸಮಾಜದ ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷರಾದ ವಿ ಟಿ ಉಮೇಶ್ ಸನಾತನ, ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ತಿಳಿಸಿದರು.

ಕಾರ್ಯಕ್ರಮಕ್ಕೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಶ್ವಕರ್ಮ ಮೂರ್ತಿಯ ಮೆರವಣಿಗೆಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರು ಕಳಸ ಕುಂಭ ಹಿಡಿದು ಸಾಗಿದರು. ಮಹಿಳೆಯರ ನೃತ್ಯವು ವೀರಗಾಸೆ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸಮಾಜದ ತಾಲೂಕು ಅಧ್ಯಕ್ಷ ಟಿ.ಉಮೇಶ್ ಸನಾತನ, ತಾಪಂ ಇಒ ಎಚ್.ಹನುಮಂತಪ್ಪ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಎಚ್.ರಂಗಪ್ಪ, ಸುರೇಶ್ ಆಚಾರ್, ಎಲ್ಲಪ್ಪಚಾರ್. ಕೆ.ಸತ್ಯನಾರಾಯಣ, ಶ್ರೀ ಮಲ್ಲಾಚಾರ್, ಸಿದ್ದೇಶ್ ಆಚಾರ್, ನಾಗವೇಣಿ, ವಿಜಯ ಪ್ರಕಾಶ್ ಆಚಾರ್, ವಸಂತ ಆಚಾರ್. ನಾಗೇಂದ್ರ ಆಚಾರ್, ಎ.ಕಾಂತರಾಜ್, ಇನ್ನು ಹಲವರು ಉಪಸ್ಥಿತರಿದ್ದರು.

ವರದಿ: ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!