ದುಬೈ: ಶಾಹೀನ್ ಅಫ್ರಿಧಿ ಅವರ ಆಲರೌಂಡ್ ಆಟದ ಪರಿಣಾಮ ಪಾಕಿಸ್ತಾನ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ ಏಶಿಯಾ ಕಪ್ ಟ್ವೆಂಟಿ-20 ಮಾದರಿಯ ಪಂದ್ಯಾವಳಿಯಲ್ಲಿ ಯುನೆಟೈಡ್ ಎಮಿರೆಟ್ಸ್ ತಂಡದ ವಿರುದ್ಧ 41 ರನ್ ಗಳಿಂದ ಜಯ ಸಾಧಿಸಿ ಸೂಪರ್-4 ರ ಹಂತಕ್ಕೆ ಪ್ರವೇಶ ಪಡೆಯಿತು.

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಪಾಕಿಸ್ತಾನ 4 ಅಂಕಗಳನ್ನು ಗಳಿಸಿದ್ದು, ಸೂಪರ್ -4 ಕ್ಕೆ ಪ್ರವೇಶ ಪಡೆಯಿತು. ಈ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರುಗಳಲ್ಲಿ 9 ವಿಕೆಟ್ ಗೆ 146 ರನ್ ಗಳಿಸಿತು.
ಪ್ರತಿಯಾಗಿ ಬ್ಯಾಟ್ ಮಾಡಿದ ಯುನೈಟೆಡ್ ಅರಬ್ ಎಮಿರೆಟ್ಸ್ ತಂಡವು 17.4 ಓವರುಗಳಲ್ಲಿ 105 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಪರಾಭವಗೊಂಡಿತು. ಇದರೊಂದಿಗೆ ಎಮಿರೆಟ್ಸ್ ತಂಡ ಪಂದ್ಯಾವಳಿಯಿಂದ ಹೊರ ಬಿದ್ದರೆ, ಎ, ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್-4 ಕ್ಕೆ ಅರ್ಹತೆ ಪಡೆದವು. ಬಿ, ಗುಂಪಿನಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ತಲಾ 4 ಅಂಕಗಳನ್ನು ಪಡೆದು ಸೂಪರ್-4 ಸನೀಹದಲ್ಲಿವೆ.
ಆದರೆ ಅಪಘಾನಿಸ್ತಾನ ಶ್ರೀಲಂಕಾ ವಿರುದ್ಧದ ತನ್ನ ಕಡೆಯ ಲೀಗ್ ಪಂದ್ಯದಲ್ಲಿ ಗೆದ್ದರೆ ಮೂರು ತಂಡಗಳು ನಾಲ್ಕು ಅಂಕಗಳೊಂದಿಗೆ ಸಮಸ್ಥಿಗೆ ಬಂದು ಸೂಪರ್- ಪ್ರವೇಶಕ್ಕೆ ರನ್ ಸರಾಸರಿ ಮೋರೆ ಹೋಗಬಹುದಾಗಿದೆ.
ಸ್ಕೋರ್ ವಿವರ
ಪಾಕಿಸ್ತಾನ 20 ಓವರುಗಳಲ್ಲಿ 9 ವಿಕೆಟ್ ಗೆ 146
ಫಕರ್ ಜಮಾನ್ 50 ( 36 ಎಸೆತ, 2 ಬೌಂಡರಿ, 3 ಸಿಕ್ಸರ್) ಶಾಹೀನ್ ಅಪ್ರಿಧಿ ಅಜೇಯ 29 ( 14 ಎಸೆತ, 3 ಬೌಂಡರಿ, 2 ಸಿಕ್ಸರ್) ಜುನೈದ ಸಿದ್ದಿಕಿ 18 ಕ್ಕೆ 4), ಸಿಮರನ್ ಜೀತ್ ಸಿಂಗ್ 26 ಕ್ಕೆ 3)
ಯುನೈಟೆಡ್ ಅರಬ್ ಎಮಿರೆಟ್ಸ್ 17.4 ಓವರುಗಳಲ್ಲಿ 105
ರಾಹುಲ್ ಚೋಪ್ರಾ 35 ( 35 ಎಸೆತ, 1 ಬೌಂಡರಿ, 1 ಸಿಕ್ಸರ್) ಶಾಹೀನ್ ಅಪ್ರಿಧಿ 16 ಕ್ಕೆ 2, ಅಬ್ರಾರ್ ಅಹ್ಮದ್ 13 ಕ್ಕೆ 2, ಹರೀಸ್ ರಫ್ 19 ಕ್ಕೆ 2)




