ಲಕ್ನೋ: ಪ್ರವಾಸಿ ಆಸ್ಟ್ರೇಲಿಯಾ ಎ, ಹಾಗೂ ಆತಿಥೇಯ ಭಾರತ ಎ, ತಂಡಗಳ ನಡುವೆ ಇಲ್ಲಿ ನಡೆದಿರುವ ಅನಧಿಕೃತ ಟೆಸ್ಟ್ ಪಂದ್ಯ ಡ್ರಾದತ್ತ ಸಾಗಿದೆ.
ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಮೂರನೇ ದಿನ ಎರಡನೇ ಅವಧಿಯ ಆಟದಲ್ಲಿ ಭಾರತ ಎ, ತಂಡ 2 ವಿಕೆಟ್ ಗೆ 189 ರನ್ ಗಳಿಸಿದ್ದು, ಇನ್ನಿಂಗ್ಸ್ ಮುನ್ನಡೆ ಪಡೆಯಲು ಇನ್ನು 343 ರನ್ ಗಳಿಸಬೇಕಿದೆ. ಸಾಯಿ ಸುದರ್ಶನ್ 60 ರನ್ ಗಳಿಸಿ ಹಾಗೂ ದೇವದತ್ತ ಪೆಡಿಕಲ್ 18 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.




