ಅಮರಾಪುರ: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ವೀರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮರಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಇಂದು ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಗ್ರಾ.ಪಂ ಸದಸ್ಯ ರಾಜಶೇಖರ್ ನಡುವಿನಮನಿ ಹಾಗೂ ಉಪಾಧ್ಯಕ್ಷರಾಗಿ ಮಲ್ಲಯ್ಯ ವಿಭೂತಿಮಠ ಆಯ್ಕೆಯಾಗಿ ಇಂದು ಶಾಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಎಲ್ಲಾ ಗಣ್ಯರ ನೇತೃತ್ವದಲ್ಲಿ ಸತ್ಕಾರ ಸ್ವೀಕಾರ ಮಾಡಿ ಅಧಿಕಾರ ಸ್ವೀಕಾರ ಮಾಡಿದರು.

ಇದೇ ಸಂದರ್ಭದಲ್ಲಿ ಕಿತ್ತೂರು ತಾಲ್ಲೂಕಿನ ಶ್ರೇಷ್ಠ ಶಿಕ್ಷಕರಾಗಿ ಆಯ್ಕೆಯಾದ ಸರ್ಕಾರಿ ಪ್ರೌಢಶಾಲೆ ವೀರಾಪುರ ಸಹ ಶಿಕ್ಷಕಿ ದೀಪಿಕಾ ಪಾಟೀಲ್, ವೀರಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ದೈಹಿಕ ಶಿಕ್ಷಕ ಮಾರುತಿ ಜೋಲದ್ ಸೇರಿದಂತೆ ಎಲ್ಲಾ ಗಣ್ಯರನ್ನು ಹಾಗೂ Sdmc ಕಮಿಟಿ ಸರ್ವ ಸದಸ್ಯರನ್ನು ಸತ್ಕಾರ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಅಧ್ಯಕ್ಷ ಆಲಿ ಸಾಬ್ ತಳಗಡೆ, ಪಿ.ಡಿ.ಓ ಸುರಮ್ಮ ಪಾಟೀಲ್, ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳು ಆದ ಸವಿತಾ ಕೋಲಕರ್, ಸಿ.ಆರ್.ಪಿ ವಿನೋದ ಪಾಟೀಲ್, ಮುಖ್ಯ ಗುರುಗಳಾದ ಮಹಾಂತೇಶ್ ಕಲ್ಲೋಳ್ಳಿ, ಪತ್ರಕರ್ತ ಬಸವರಾಜು ಸೇರಿದಂತೆ ಎಲ್ಲಾ ಅಮರಾಪುರ ಗ್ರಾಮದ ಗ್ರಾಮಸ್ಥರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರೊಂದಿಗೆ ಮಾತನಾಡಿದ ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜಶೇಖರ್ ನಡುವಿನಮನಿ ಹಾಗೂ ಮುಖಂಡ ಮಲ್ಲನಗೌಡ ಪಾಟೀಲ್ ಶಾಲೆಯ ಶ್ರೇಯೋಭಿವೃದ್ಧಿಗೆ ಸಧಾ ಬದ್ಧರಾಗಿದ್ದೇವೆ ಎಂದು ಹೇಳಿದರು.
ವರದಿ: ಬಸವರಾಜು




