——————————————-ದೇವದತ್ತ ಪೆಡಿಕಲ್, ದ್ರುವ್ ಜುರೇಲ್ ಆಕರ್ಷಕ ಶತಕ
ಲಕ್ನೋ: ದೇವದತ್ತ ಪೆಡಿಕಲ್ ಅಜೇಯ ಶತಕ ( 139) ಹಾಗೂ ದ್ರುವ್ ಜುರೇಲ್ (140) ಭರ್ಜರಿ ಶತಕಗಳ ನೆರವಿನಿಂದ ಭಾರತ ‘ಎ’ ತಂಡವು ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಅನಧಿಕೃತ ಟೆಸ್ಟ್ ಅಭ್ಯಾಸ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆಯತ್ತ ಸಾಗಿದೆ.

ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ದಿನದ ಮೊದಲ ಅವಧಿಯ ಆಟದಲ್ಲಿ ಭಾರತ ‘ಎ’ ತಂಡವು 6 ವಿಕೆಟ್ ಗೆ 503 ರನ್ ಗಳಿಸಿದ್ದು, ಇನ್ನಿಂಗ್ಸ್ ಮುನ್ನಡೆಗೆ ಉಳಿದ ನಾಲ್ಕ ವಿಕೆಟ್ ಗಳಿಂದ 30 ರನ್ ಗಳನ್ನು ಮಾತ್ರ ಗಳಿಸಬೇಕಿದೆ. ಕರ್ನಾಟಕದ ಎಡಗೈ ಬ್ಯಾಟುಗಾರ ದೇವದತ್ತ ಪೆಡಿಕಲ್ 139 ರನ್ ಗಳಿಸಿ ಹಾಗೂ ಹರ್ಷ ದುಬೈ 2 ರನ್ ಗಳಿಸಿ ಕ್ರೀಸ್ ಬಳಿ ಇದ್ದರು.
ಸ್ಕೋರ್ ವಿವರ
ಆಸ್ಟ್ರೇಲಿಯಾ ‘ಎ’ 6 ವಿಕೆಟ್ ಗೆ 532 ಡಿಕ್ಲೇರ್
ಭಾರತ ‘ಎ’ 6 ವಿಕೆಟ್ ಗೆ 503 ( ದೇವದತ್ತ ಪೆಡಿಕಲ್, ಬ್ಯಾಟಿಂಗ್ 139 ( 265 ಎಸೆತ, 12 ಬೌಂಡರಿ, 1 ಸಿಕ್ಸರ್)
ದ್ರುವ್ ಜುರೇಲ್ 140 ( 197 ಎಸೆತ, 13 ಬೌಂಡರಿ, 4 ಸಿಕ್ಸರ್)




