———————-ವಿಜಯ ವರ್ಮಾರೊಂದಿಗೆ ಸಂಬಂಧ ಕಡಿದುಕೊಂಡಿದ್ದು, ಈಗ ಇತಿಹಾಸ
———-ಸಮಾಜ ಮುಖಿ ಕೆಲಸ ಮಾಡಿದಾತ ನನ್ನ ಗೆಳೆಯನಾಗಬೇಕು: ತಮನ್ನಾ ಭಾಟಿಯಾ

ಬಾಲಿವುಡ್ ಖ್ಯಾತ ನಟಿ ತಮ್ಮನ್ನಾ ಭಾಟಿಯಾ ಇದೀಗ ತಮ್ಮ ಜೀವನ ಹಾಗೂ ಪ್ರೀತಿ ವಿಷಯದ ಬಗ್ಗೆ ಮರು ಚಿಂತನೆ ನಡೆಸಿದ್ದಾರೆ. 35 ವರ್ಷ ವಯಸ್ಸಿನ ತಮನ್ನಾ ಭಾಟಿಯಾ ಅವರು ಓರ್ವ ಶ್ರೇಷ್ಠ ಜೀವನ ಸಂಗಾತಿಯನ್ನು ಪಡೆಯುವದರ ಬಗ್ಗೆ ಚಿಂತನೆ ನಡೆಸಿದ್ದಾರೆ. 2025 ಆರಂಭದಲ್ಲೇ ವಿಜಯ ವರ್ಮಾ ಅವರೊಂದಿಗೆ ಸಂಬಂಧ ಮುರಿದುಕೊಂಡ ನಂತರ ತಮನ್ನಾ ಹೊಸ ಗೆಳೆಯನ ಹುಡುಕಾಟದಲ್ಲಿದ್ದಾರೆ. ನಾನು ನಿಜಕ್ಕೂ ಓರ್ವ ಶ್ರೇಷ್ಠ ಜೀವನ ಸಂಗಾತಿಯನ್ನು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ನಾನು ಎಂಥ ವ್ಯಕ್ತಿಯನ್ನು ಆರಿಸಿಕೊಳ್ಳಲು ಮುಂದೆ ನೋಡುತ್ತಿದ್ದೇನೆ ಎಂದರೆ ಆ ವ್ಯಕ್ತಿ ಮುಗಿದು ಹೋದ ಕಾಲ ಘಟ್ಟದಲ್ಲಿ ಉತ್ತಮ ಸಮಾಜ ಮುಖಿ ಕೆಲಸಗಳನ್ನು ಮಾಡಿರಬೇಕು ಎಂದು ತಮ್ಮನ್ನಾ ಭಾಟಿಯಾ ತಮ್ಮ ಮನದಾಳದ ಮಾತನ್ನು ಹೇಳಿ ಕೊಂಡಿದ್ದಾರೆ.





