
ಸಿರುಗುಪ್ಪ: ಸೆಪ್ಟಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ನಡೆಯಲಿರುವ ರಾಜ್ಯ ಸರ್ಕಾರ ಸೂಚಿತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಗಣತಿದಾರರು, ಮೇಲ್ವಿಚಾರಕರಿಗೆ ಶುಕ್ರವಾರದಂದು ನಗರದ ವಿಶ್ವಜ್ಯೋತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ತರಬೇತಿ ಕಾರ್ಯಗಾರ ಜರುಗಿತು.
ಕರ್ನಾಟಕ ರಾಜ್ಯ ಹಿಂದುಳಿದ ಆಯೋಗ, ತಾಲೂಕಾಡಳಿತ ಹಾಗೂ ತಾಲೂಕು ಪಂಚಾಯಿತಿಗಳ ಸಹಯೋಗದಲ್ಲಿ ಸಮೀಕ್ಷೆಗಾಗಿ ಗಣತಿದಾರರು, ಮೇಲ್ವಿಚಾರಕರಿಗೆ ನಡೆದ ತರಬೇತಿ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪವನ್‌ಕುಮಾರ್.ಎಸ್.ದಂಡಪ್ಪನವರ್ ಉದ್ಘಾಟಿಸಿದರು.

ನಂತರ ಮಾತನಾಡಿ ಎಲ್ಲಾ ಗಣತಿದಾರರು ಹಾಗೂ ಮೇಲ್ವಿಚಾರಕರು ಆಸಕ್ತಿಯನ್ನು ವಹಿಸಿ ಸೂಕ್ತ ತರಬೇತಿಯನ್ನು ಪಡೆದು ಸಮೀಕ್ಷೆಯನ್ನು ನಡೆಸಿ ಸರ್ಕಾರದ ಮಹತ್ವದ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಮಲ್ಲಿಕಾರ್ಜುನ ಅವರು ಮಾತನಾಡಿ ತರಬೇತಿಗೆ ಎಲ್ಲಾ ಗಣತಿದಾರರು ಕಡ್ಡಾಯವಾಗಿ ಹಾಜರಿರಬೇಕೆಂಬುದು ಜಿಲ್ಲಾಧಿಕಾರಿಯವರ ಆದೇಶವಿದೆ.
ಆದ್ದರಿಂದ ಗೈರು ಹಾಜರಾಗಿ ಕಾನೂನು ಕ್ರಮಕ್ಕೆ ತುತ್ತಾಗದೇ ಗಣತಿಗೆ ಅವಶ್ಯವಿರುವ ಸಂಪೂರ್ಣ ಮಾಹಿತಿಯ ಕೈಪಿಡಿಯೊಂದಿಗೆ ನಿಮಗೆ ಸ್ಮಾರ್ಟ್ ಕ್ಲಾಸ್ ನಡೆಸಲಾಗುತ್ತಿದೆ. ಸೂಕ್ತ ತರಬೇತಿ ಪಡೆದುಕೊಂಡು ಸಮಗ್ರ ಗಣತಿಗೆ ನೆರವಾಗಬೇಕೆಂದು ತಿಳಿಸಿದರು.
ಇದೇ ವೇಳೆ ಕಂದಾಯ ಇಲಾಖೆಯ ಶಿರಸ್ತೆದಾರ ರಾಘವೇಂದ್ರ, ವಿಶ್ವಜ್ಯೋತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲಾ ಅಧ್ಯಕ್ಷ ಬಸವಲಿಂಗಪ್ಪ, ಪ್ರಾಂಶುಪಾಲ ಬಿಜು.ಎಮ್.ಜೋಸೆಫ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರವರ್ಮ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಗುರ‍್ರಪ್ಪ, ಡಯಟ್ ಉಪನ್ಯಾಸಕರಾದ ಗಂಗಾಧರ, ರೇವಣಸಿದ್ದಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹೆಚ್.ಜೆ.ಶ್ರೀಧರ, ಮುಖ್ಯಗುರು ಚಂದ್ರಮೌಳಿ ಹಾಗೂ ವಿವಿಧ ಇಲಾಖೆಗಳ ತರಬೇತುದಾರರು, ಗಣತಿದಾರರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




