ಸೇಡಂ: ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಘಟಕ ವತಿಯಿಂದ ಕೋಲಕುಂದಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಹೂವಿನ ಗಿಡ ನೆಡುವ ಮೂಲಕ ಕನ್ನಡ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಅಶೋಕ್ ರೆಡ್ಡಿ ಚಿಲುಮೆ ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳು ಕೋಲಕುಂದಾ ವಹಿಸಿದರು. ಸವಿತಾ ರವಿ ರಾಠೋಡ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಕೋಲಕುಂದಾ, ಮುಖ್ಯ ಅತಿಥಿಗಳು ಸಿದ್ದಯ್ಯ ಸ್ವಾಮಿ ಆಡಕಿ ಪತ್ರಕರ್ತರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿಗಳು ಸೇಡಂ ರವರು ಕನ್ನಡ ಜಾಗೃತಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ವರದಾ ಸ್ವಾಮಿ ಬಿ ಹಿರೇಮಠ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರು ಕಲಬುರ್ಗಿ ಮುಧೋಳ ವಲಯ ಮತ್ತು ಕೋಲುಕುಂದ ವಲಯದಲ್ಲಿ ಕನ್ನಡ ಭಾಷೆ ಎಲ್ಲಾ ಇಲಾಖೆಯ ಕ್ಷೇತ್ರದಲ್ಲಿ ಬೆಳೆಯಲ್ಲಿ ಎಂದು ಮಾತನಾಡಿದರು.
ಓಂ ಪ್ರಕಾಶ್ ಅಬಕಾರಿ ಇಲಾಖೆ ನಿರೀಕ್ಷಕರು ರವರು ಡ್ರಗ್ಸ್ ಗಾಂಜಾ ಸೇವನೆಯಿಂದ ಆಗುವ ಆರೋಗ್ಯ ಹಾನಿಕರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ಅಧಿಕಾರಿಗಳಾದ ರೇಖಾ ಶ್ರೀನಿವಾಸ್ ಮೋಕದಮ್ ಅವರು ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು.
ಅಶೋಕ್ ಮಡಿವಾಳ ಕೊತ್ತಪಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷರು ಸೇಡಂ, ಅರಣ್ಯ ಇಲಾಖೆ ಅಧಿಕಾರಿ ಅರ್ಜುನ್, ಕಾಶಿನಾಥ್ ಸಿಆರ್ಪಿ ಕೋಲಕುಂದಾ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಜಗನ್ನಾಥ್, ಬಶೀರ್ ಅಹ್ಮದ್ ಪ್ರಬಾರಿ ಮುಖ್ಯ ಗುರುಗಳು ಪ್ರೌಢ ಶಾಲೆ ಮೋತಕಪಲ್ಲಿ ಇವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರು ಸ್ಥಾನಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಲ್ಲರೆಡ್ಡಿ, ಉಮೇಶ್ ದೇವರಹಳ್ಳಿ, ತಾಲೂಕ ಪ್ರಧಾನ ಕಾರ್ಯದರ್ಶಿಗಳು, ಸಹ ಶಿಕ್ಷಕರುಗಳು ಸಿಬ್ಬಂದಿ ವರ್ಗದವರು ಶಾಲೆಯ ಮುದ್ದು ಮಕ್ಕಳು ಗ್ರಾಮದ ಮುಖಂಡರು ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




